ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಅವರ ತ್ರಿ ಈಡಿಯಟ್ಸ್ ಸಿನಿಮಾ ಬಾಲಿವುಡ್ಡಿನಲ್ಲಿ ಹೊಸ ಚೈತನ್ಯ ಮೂಡಿಸಿದ್ದು ಹಳೇ ಸಂಗತಿ. ಈ ಚಿತ್ರವೀಗ ಕನ್ನಡ ಸೇರಿದಂತೆ ತಮಿಳು, ತೆಲುಗುಗಳಿಗೂ ರಿಮೇಕ್ ಆಗುತ್ತಿರುವುದೂ ಹಳೆಯ ಸುದ್ದಿಯೇ. ಆದರೀಗ ಹೊಸ ಸುದ್ದಿ ಏನಪ್ಪಾ ಅಂದ್ರೆ, ಕನ್ನಡದ ತ್ರಿ ಈಡಿಯಟ್ಸ್ ನಾಯಕನಾಗಿ ಗಣೇಶ್ ಆಯ್ಕೆಯಾಗಿದ್ದಾರಂತೆ.
ಇತ್ತೀಚೆಗಷ್ಟೆ ಗಣೇಶ್ ತನ್ನ ಪತ್ನಿ ಜೊತೆಗೆ ತ್ರಿ ಈಡಿಯಟ್ಸ್ ನೋಡಿ ತುಂಬಾ ಖುಷಿ ಪಟ್ಟರಂತೆ. ಖಂಡಿತವಾಗಿ ನಾನು ಅಮೀರ್ ಖಾನ್ ಮಾಡಿದ ಪಾತ್ರ ಮಾಡಲು ಇಷ್ಟಪಡುತ್ತೇನೆ. ಈಗಾಗಲೇ ಅದಕ್ಕಾಗಿ ಇಬ್ಬರು ನಿರ್ಮಾಪಕರನ್ನೂ ಸಂಪರ್ಕಿಸಿದ್ದೇನೆ ಎಂದು ಗಣೇಶ್ ತಾವೇ ಹೇಳಿಕೆ ನೀಡಿದ್ದಾರೆ.
ಸದ್ಯಕ್ಕಂತೂ ಗಣೇಶ್ ಏನೋ ಒಂಥರಾ ಮೂಡ್‌ನಲ್ಲಿದ್ದಾರೆ. ಅರ್ಥಾತ್ ಏನೋ ಒಂಥರಾ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ. ಕರೀನಾ ಕಪೂರ್, ಮಾಧವನ್, ಶರ್ಮಾನ್ ಜೋಷಿ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಯಾರು ನಿಭಾಯಿಸುತ್ತಾರೆ ಎಂದರೆ ಗಣೇಶ್ ಆ ಬಗ್ಗೆಯೆಲ್ಲಾ ಈಗ ಹೆಚ್ಚು ಯೋಚಿಸಿಲ್ಲವಂತೆ. ಆದರೆ ತ್ರಿ ಈಡಿಯಟ್ಸ್ ಬಗ್ಗೆ ಇನ್ನೂ ಸರಿಯಾದ ನಿರ್ಧಾರಗಳಾಗಿಲ್ಲವಾದ್ದರಿಂದ ಹೆಚ್ಚಿನ ಮಾಹಿತಿ ಗಣೇಶ್ ಅವರಲ್ಲೂ ಇಲ್ಲವಂತೆ.
ಈವರೆಗೆ ತ್ರಿ ಈಡಿಯಟ್ಸ್‌ಗೆ ಗಣೇಶ್ ಅಥವಾ ಸುದೀಪ್ ಎಂಬ ಎರಡೂ ಹೆಸರುಗಳು ಚಾಲ್ತಿಯಲ್ಲಿತ್ತು. ಆದರೆ ಮೊದಲು ಗಣೇಶ್ ಬಾಯ್ಬಿಟ್ಟಿದ್ದಾರೆ. ಇನ್ಯಾರು ಬಾಯ್ಬಿಡುತ್ತಾರೆ ಕಾಯಬೇಕು!!!