ನಟಿ ಶರ್ಮಿಳಾ ಮಾಂಡ್ರೆ ನಿರ್ದೇಶಕಿ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ವಿಶೇಷವೆಂದರೆ, ನಿರ್ದೇಶನ ಮಾಡುವುದಕ್ಕೆ ಮುಂಚೆ ಅವರು ಮದುವೆ ಮಾಡಿಕೊಳ್ಳಬೇಕಂತೆ.
ಇದು ಸುಳ್ಳಲ್ಲ. ನಾನೊಬ್ಬ ಕಲಾವಿದೆ. ನನಗೂ ಹತ್ತಾರು ಆಸೆಗಳಿವೆ. ಅಂತಹ ಅಸೆಗಳಲ್ಲಿ ನಿರ್ದೇಶನ ಮಾಡಬೇಕೆಂಬುದು ನನ್ನ ಮಹದಾಸೆ ಎನ್ನುತ್ತಾರೆ ಅವರು.
ನಿರ್ದೇಶನ ಮಾಡುವುದು ಸುಲಭವಲ್ಲ. ಅದೊಂದು ಜವಾಬ್ದಾರಿಯ ಕೆಲಸ. ಅದಕ್ಕೆ ತಾಳ್ಮೆ, ಪರಿಶ್ರಮ, ಶ್ರದ್ದೆ ಮುಖ್ಯ ಎನ್ನುತ್ತಾರೆ ಶರ್ಮಿಳಾ. ನಿರ್ದೇಶನ ಮಾಡುವುದೇ ಆದರೆ ಅದು ನನ್ನ ಮದುವೆಯ ಬಳಿಕ ಎನ್ನುತ್ತಾರೆ ಅವರು. ಸದ್ಯಕ್ಕೆ ಅವರು ಉತ್ತಮ ನಟಿಯಾಗಿ ಒಳ್ಳೆಯ ಚಿತ್ರಗಳನ್ನು ಕೊಡುವ ಉತ್ಸಾಹದಲ್ಲಿರುವುದಾಗಿ ಹೇಳುತ್ತಾರೆ. ಈಗ ನಟಿಸೋದಷ್ಟೇ ನನ್ನ ಮುಂದಿನ ಗುರಿ. ಅದರಲ್ಲೇ ಗುರುತಿದಕೊಳ್ಳಬೇಕೆಂಬ ಛಲವಿದೆ. ಆ ನಂತರ ನಿರ್ದೇಶನ ಎನ್ನುತ್ತಾರೆ ಶರ್ಮಿಳಾ.
ಹಾಗಾದರೆ ಮದ್ವೆ ಯಾವಾಗ ಶರ್ಮಿಳಾ ಎಂದರೆ ಕಿಸಕ್ಕನೆ ತುಂಟ ಕಣ್ಣುಗಳಲ್ಲಿ ನಗು ಚೆಲ್ಲಿ ನಾಚುತ್ತಾರೆ. ಸದ್ಯಕ್ಕಂತೂ ಮದ್ವೆ ಗೊಡವೆ ಇಲ್ಲ ಎಂಬುದಷ್ಟೆ ಇದರರ್ಥ.