ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಧುನಿಕ ಶೈಲಿಯಲ್ಲಿ ಅಪರ್ಣ, ಸ್ಟೇಟ್ಸ್ ಚಿತ್ರಮಂದಿರಗಳು (Aparna | States | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
ಇಂದು ಚಿತ್ರಮಂದಿರಗಳಿಗೆ ಬಂದು ಚಿತ್ರ ವೀಕ್ಷಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇಂಥ ಸಂದರ್ಭದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯಲು ಮಾಲೀಕರು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಕೆ.ಜಿ.ರಸ್ತೆಯ ಅಪರ್ಣ ಮತ್ತು ಸ್ಟೇಟ್ಸ್ ಚಿತ್ರಮಂದಿರಗಳು ಆ ಪ್ರಯತ್ನದಲ್ಲಿ ಯಶಸ್ವಿಯಾಗಿವೆ.

ಬೆಂಗಳೂರಿನಲ್ಲಿ ಸಾಕಷ್ಟು ಚಿತ್ರಮಂದಿರಗಳ ಮಾಲೀಕರು ವಾಣಿಜ್ಯ ಸಂಕೀರ್ಣಗಳತ್ತ ಆಕರ್ಷಿತರಾಗಿರುವ ಕಾಲದಲ್ಲಿ ಪದ್ಮನಾಭನಗರದ ಹಳೆಯ ಶ್ರೀನಿವಾಸ ಚಿತ್ರಮಂದಿರ ಪಿ.ವಿ.ಆರ್ ಮಾದರಿಯಲ್ಲಿ ಸಜ್ಜುಗೊಳ್ಳುತ್ತಿದೆ. ಈ ಚಿತ್ರ ಮಂದಿರಕ್ಕೆ ಆಧುನಿಕ ಟಚ್ ಕೊಟ್ಟು ಡಿಜಿಟಲ್ ಸಿಸ್ಟಂ ಅಳವಡಿಸಿ ಪುನಃ ಪ್ರಾರಂಭಿಸುತ್ತಿದ್ದಾರೆ ಈ ಚಿತ್ರಮಂದಿರದ ಮಾಲೀಕರಾದ ದೇವೇಂದ್ರ ರೆಡ್ಡಿ.

ರಾಜ್ಯದಲ್ಲಿ ಹಲವು ಚಿತ್ರಮಂದಿರಗಳು ಹಳೆ ವ್ಯವಸ್ಥೆಗಳಿಗೆ ಒಗ್ಗಿಕೊಂಡು ಸಾಗುತ್ತಿವೆ. ಮತ್ತೆ ಕೆಲವನ್ನು ನೆಲಸಮ ಮಾಡಿ ವಾಣಿಜ್ಯ ಸಂಕೀರ್ಣಗಳನ್ನಾಗಿ ಮಾಡಲಾಗುತ್ತಿದೆ. ಅದರ ಬದಲು ಆಧುನೀಕತೆಗೆ ಹೊಂದಿಕೊಂಡು ಮಲ್ಟಿಪ್ಲೆಕ್ಸ್ ಶೈಲಿಯಲ್ಲಿ ಚಿತ್ರಮಂದಿರವನ್ನು ರೂಪುಗೊಳಿಸಿದರೆ ಖಂಡಿತವಾಗಿ ಪ್ರೇಕ್ಷಕರು ಥಿಯೇಟರ್ಗಳತ್ತ ಮುಖ ಮಾಡುವುದರಲ್ಲಿ ಅನುಮಾನವಿಲ್ಲ ಎಂಬುದು ಥಿಯೇಟರ್ ಮಾಲಿಕರ ಲೆಕ್ಕಾಚಾರ. ಆದರೆ, ಅದಕ್ಕೆ ಸಮನಾಗಿ ಉತ್ತಮ ಚಿತ್ರಗಳೂ ಹೊರಬರಬೇಕಾಗಿದೆ ಎಂಬುದು ಅಷ್ಟೇ ಸತ್ಯ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಪರ್ಣ, ಸ್ಟೇಟ್ಸ್, ಕನ್ನಡ ಸಿನಿಮಾ, ಚಿತ್ರೋದ್ಯಮ ಅಪರ್ಣ, ಸ್ಟೇಟ್ಸ್, ಕನ್ನಡ ಸಿನಿಮಾ, ಚಿತ್ರೋದ್ಯಮ