ಕನ್ನಡದ ಕಪ್ಪು ಬಿಳುಪು ಚಿತ್ರಗಳ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಅರವಿಂದ್ ನಿರ್ದೇಶನದ ಚಿತ್ರ ಜುಗಾರಿ ಬಿಡುಗಡೆಗೆ ಮುನ್ನವೇ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿದೆ.
ನಿರ್ಮಾಪಕ ರಮೇಶ್ ಬರೆದ ಕಥೆಗೆ ಅರವಿಂದ್ ಚಿತ್ರಕಥೆ ಮಾಡಿ ನಿರ್ದೇಶಿಸಿದ್ದಾರೆ. ವಿಶೇಷವೆಂದರೆ ಈ ಚಿತ್ರದ ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿರುವವರು ನರಸಿಂಹರಾಜು ಅವರ ಮತ್ತೊಬ್ಬ ಮೊಮ್ಮಗ ಅವಿನಾಶ್ ದಿವಾಕರ್.
ಇದು ಅರವಿಂದರ ಚೊಚ್ಚಲ ಪ್ರಯತ್ನ. ಆದರೆ ಈಗಾಗಲೇ ಉದ್ಯಮದಲ್ಲಿ ಭಾರೀ ಸದ್ದು ಮಾಡುತ್ತಿರುವುದಂತೂ ನಿಜ. ಇಂದಿನ ಸಮಾಜದ ಭ್ರಷ್ಟಾಚಾರವನ್ನು ಯಾವುದೇ ರಕ್ತಪಾತವಿಲ್ಲದೆ ನಿರ್ಮೂಲನೆ ಹೇಗೆ? ಎಂಬುದೇ ಕಥಾವಸ್ತುವಂತೆ. ಭ್ರಷ್ಟಾಚಾರಿಗಳಿಗೂ ಅರಿವು ಮೂಡಿಸುವ ಮೂಲಕ ಸಾಮಾಜಿಕ ಮೌಲ್ಯಗಳನ್ನು ಕಾಪಾಡುವ ಕಥೆಯನ್ನು ವಿಭಿನ್ನ ಕುತೂಹಲದ ಆಯಾಮದೊಂದಿಗೆ ಚಿತ್ರಿಸಿದ್ದಾರಂತೆ.