ಸಾಹಸ ದೃಶ್ಯಗಳಲ್ಲಿ ಅದ್ಬುತವಾಗಿ ನಟಿಸುವ ದುನಿಯಾ ಖ್ಯಾತಿಯ ವಿಜಯ್, ಇದೀಗ ತಮ್ಮ ಫೈಟ್ ಶೈಲಿಯನ್ನು ಹಾಲಿವುಡ್ ಮಾದರಿಯಲ್ಲಿ ವೈಭವೀಕರಿಸಲು ಮುಂದಾಗಿದ್ದಾರೆ.
ಹಾಲಿವುಡ್ ಚಿತ್ರಗಳ ಸಾಹಸ ದೃಶ್ಯಗಳ ಸನ್ನಿವೇಶಗಳಲ್ಲಿ ಮಾತ್ರ ಬಳಸುವ 60 ಅಡಿ ಎತ್ತರದಿಂದ ಬಿದ್ದರೂ ಏನೂ ಪೆಟ್ಟಾಗದಂತೆ ರಕ್ಷಿಸುವ ಸೇಫ್ ಗಾರ್ಡ್ ಏರ್ ಬ್ಯಾಗನ್ನು ವಿಜಿ ಕನ್ನಡಕ್ಕೆ ತರುತ್ತಿದ್ದಾರೆ.
ಇದು ಅವರ ಮುಂದಿನ ಚಿತ್ರ ಸಿಂಹಾದ್ರಿಗಾಗಿ. ಈ ಚಿತ್ರ ತೆಲುಗಿನ ರಿಮೇಕ್ ಆಗಿದ್ದು, ಅಲ್ಲಿ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ತುಷಾರ್ ರಂಗನಾಥ್ ನಿರ್ದೇಶಿಸಲಿರುವ ಈ ಚಿತ್ರ ಫೆಬ್ರುವರಿಯಲ್ಲಿ ಸೆಟ್ಟೇರಲಿದೆ.
ಕನ್ನಡದಲ್ಲಿ ಯಾರೊಬ್ಬರೂ ಮಾಡದಂತಹ ತುಂಬ ರಿಸ್ಕ್ ಆಗಿರುವಂತಹ ಸಾಹಸ ದೃಶ್ಯಗಳನ್ನು ಮಾಡಲು ಬ್ಯಾಂಕಾಕ್‌ನ ಮುವ್ತಾಯ್ ವಿದ್ಯೆ ಕಲಿಯುತ್ತಿದ್ದೇನೆ. ಸದ್ಯ ಬರಿಯ ಜಾಕಿ ಚಾನ್ ಚಿತ್ರಗಳನ್ನು ಮಾತ್ರ ನೋಡುತ್ತಿದ್ದೇನೆ ಎನ್ನುತ್ತಾರೆ ವಿಜಿ.