ದೇಶ- ವಿದೇಶ ಖ್ಯಾತಿಯ ಛಾಯಾಗ್ರಾಹಕ ನಿಮಾಯ್ ಘೋಷ್ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಬಂಗಾಳಿ, ಹಿಂದಿ, ಇಂಗ್ಲೀಷ್ ಚಿತ್ರಗಳಿಗೆ ದುಡಿದಿದ್ದ ಅವರು ಚಿತ್ರರಂಗದ ದಿಗ್ಗಜ ಸತ್ಯಜೀತ್ ರೇ ಅವರ ಹೆಚ್ಚು ಕಮ್ಮಿ ಎಲ್ಲಾ ಚಿತ್ರಗಳಿಗೂ ಸ್ಟಿಲ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದರು. ಅವರೀಗ ಕನ್ನಡದ ಚಿತ್ರವೂಂದಕ್ಕೆ ಸ್ಟಿಲ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಲಿದ್ದಾರೆ. ಆ ಚಿತ್ರ ಯಾವುದಪ್ಪಾ ಎಂದರೆ ಸುಧೀರ್ ಅತ್ತಾವರ್ ನಿರ್ದೇಶನದ ತಳಿರು ತೋರಣ ಚಿತ್ರ.
ಇವರು ಸುಧೀರ್ ಅವರಿಗೆ ಹೇಗೆ ಸಿಕ್ಕರೆಂದರೆ, ಆ ದಿನಗಳಲ್ಲಿ ಸುಧೀರ್ ಅವರು ಎಂ.ಎಸ್.ಸತ್ಯು ಅವರೊಂದಿಗೆ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಸತ್ಯು ಅವರೊಂದಿಗೆ ಘೋಷ್ ಕಾರ್ಯ ನಿರ್ವಹಿಸುತ್ತಿದ್ದರು. ಸುಧೀರ್ ಕಾರ್ಯ ವೈಖರಿಯನ್ನು ಕಂಡ ಘೋಷ್ ತಾವು ನಿಮ್ಮೊಂದಿಗೆ ಒಮ್ಮೆ ಕೆಲಸಮಾಡಬೇಕು ಎಂದು ತಮ್ಮ ಆಸೆಯನ್ನು ಹೊರಹಾಕಿದ್ದರು. ಇದೀಗ ಸುಧೀರ್ ನಿರ್ದೇಶಿಸುತ್ತಿದ್ದಾರೆ. ಹಾಗೆಯೇ ಘೋಷ್ ಕೂಡ ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.