ಕ್ರೇಜಿ ಸ್ಟಾರ್ ಪಟ್ಟವನ್ನಲಂಕರಿಸಿದ ರವಿಚಂದ್ರನ್ ಕೂಡಾ ಇನ್ನೊಬ್ಬ ಕ್ರೇಜಿ ಯಾರು ಎಂದು ಹೊರಳಿ ನೋಡುವ ಕಾಲ ಬಂದಿದೆ. ಯಾಕೆಂದರೆ ಶೀಘ್ರದಲ್ಲೇ ನಟ ರಮೇಶ್ ಅರವಿಂದ್ ಅವರ ಕ್ರೇಜಿ ಕುಟುಂಬ ತೆರೆ ಕಾಣಲಿದೆ!
ರಮೇಶ್ ಇದೀಗ ತಾವು ನಟಿಸಿದ ಕ್ರೇಜಿ ಕುಟುಂಬ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. ಕಾರಣ, ಆ ಚಿತ್ರದಲ್ಲಿ ತಾವು ನಟಿಸಿದ ಖುಷಿ ಅವರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಂತೆ.
ಉತ್ತರ ಕರ್ನಾಟಕದ ಭಾಷೆಯನ್ನು ಸಂಪೂರ್ಣವಾಗಿ ಈ ಚಿತ್ರ ಬಳಸಿಕೊಂಡಿದೆಯಂತೆ. ರಮೇಶ್ ಅವರ ಪ್ರಕಾರ ಇದೊಂದು ಭಿನ್ನವಾದ ಚಿತ್ರವಂತೆ. ತಾವು ಮತ್ತು ಅನಂತನಾಗ್ ಪೈಜಾಮ- ಜುಬ್ಬಾ, ಟೋಪಿ, ಧೋತಿ ಧರಿಸಿಕೊಂಡು ನಟಿಸಿರುವುದು ಸಖತ್ ಮಜವಾಗಿದೆ ಎನ್ನುತ್ತಾರೆ ರಮೇಶ್.
ಚಿತ್ರದಲ್ಲಿ ಮಾತನ್ನು ಡಬ್ ಮಾಡಲು ರಮೇಶ್ ತಮ್ಮ ಉತ್ತರ ಕರ್ನಾಡಕದ ಸ್ನೇಹಿತರೊಬ್ಬರ ಸಹಾಯ ಪಡೆದಿದ್ದಾರಂತೆ. ಅಂತೂ ಕ್ರೇಜಿ ಕುಟುಂಬ ಅಂತಿಮ ಹಂತಕ್ಕೆ ಬಂದಿದ್ದು ಫೆಬ್ರುವರಿಯಲ್ಲಿ ಚಿತ್ರ ಬಿಡುಗಡೆ ಖಂಡಿತ ಎನ್ನುತ್ತಾರೆ ರಮೇಶ್.