ರಮೇಶ್ ಭಾಗವತ್ ನಿರ್ದೇಶನದ ಯಕ್ಷ ಚಿತ್ರದಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ನಟಿಸುತ್ತಿರುವುದು ನಿಮಗೆಲ್ಲಾ ತಿಳಿದಿದೆ. ವಿಶೇಷ ಏನಪ್ಪಾ ಎಂದರೆ ಸ್ವತಃ ನಾನಾ ಅವರೇ ಯಕ್ಷ ಚಿತ್ರದ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದಾರೆ.
ತಾವೇ ಡಬ್ಬಿಂಗ್ ಮಾಡಿದರೆ ಮಾತ್ರ ತಮ್ಮ ಪಾತ್ರ ಪರಿಣಾಮಕಾರಿಯಾಗಿ ಬರುತ್ತದೆ ಎಂಬ ಕಾರಣಕ್ಕಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕಾಗಿಯೇ ಅವರು ಕನ್ನಡದ ಸಂಭಾಷಣೆಯನ್ನು ಹಿಂದಿಯಲ್ಲಿ ಬರೆದುಕೊಂಡು ಅಭ್ಯಾಸ ಮಾಡುತ್ತಿದ್ದಾರಂತೆ.
ಯೋಗೇಶ್ ನಾಯಕ ನಟನಾಗಿ ನಟಿಸಿರುವ ಯಕ್ಷ ಚಿತ್ರ ಅವರದೇ ಬ್ಯಾನರಿನ ಚಿತ್ರ. ಈ ಚಿತ್ರದಲ್ಲಿ ನಾನಾ ಪಾಟೇಕರ್ ಅವರದ್ದು ಪೊಲೀಸ್ ಅಧಿಕಾರಿಯ ಪಾತ್ರ. ಸೊಗಸಾಗಿ ತಮ್ಮ ಚಿತ್ರದಲ್ಲಿ ನಾನಾ ನಟಿಸಿದ್ದಾರೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಮೇಶ್ ಭಾಗವತ್.
ಕನ್ನಡ ತಿಳಿದಿದ್ದರೂ ಡಬ್ಬಿಂಗ್ ಮಾಡಲು ಮನಸ್ಸು ಮಾಡದ ನಮ್ಮ ನಟ ನಟಿಯರಿಗೆ ನಾನಾ ಅವರು ಮಾದರಿಯಾಗಬೇಕಿದೆ ಅನ್ನದೆ ವಿಧಿಯಿಲ್ಲ.