ನಟಿ ರಮ್ಯಾ ಇದೀಗ ಹೊಸ ನಿರೀಕ್ಷೆಗಳೊಂದಿಗೆ ಕಾಯುತ್ತಿದ್ದಾರಂತೆ. ಹಾಗೆ ಕಾಯುವುದರಲ್ಲೂ ಒಂಥರಾ ಸಂತೋಷವಿದೆ ಎನ್ನುತ್ತಾರೆ ರಮ್ಯಾ. 2009ರಲ್ಲಿ ಪರದೆಯ ಮೇಲೆ ಪ್ರದರ್ಶನ ನೀಡದೆ ದೂರವೇ ಉಳಿದಿದ್ದ ರಮ್ಯಾ ತಮ್ಮ ಅಭಿಮಾನಿಗಳಿಗೆ ನಿರಾಶೆ ಉಂಟುಮಾಡಿದ್ದರು. ಆದರೆ ಹಲವು ವಿವಾದಗಳಿಂದ ಮಾತ್ರ ಸಖತ್ ಸುದ್ದಿಯಾಗಿದ್ದರು. ಈ ಬೇಸರ ಅವರಲ್ಲಿಯೂ ಇದೆಯಂತೆ.
ಕಳೆದ ವರ್ಷ ರಮ್ಯಾ ನಟಿಸಿದ ಜಸ್ಟ್ ಮಾತ್ ಮಾತಲ್ಲಿ, ಕಿಚ್ಚ ಹುಚ್ಚ, ಸಂಜು ವೆಡ್ಸ್ ಗೀತಾ ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿವೆ. ಹಾಗಾಗಿಯೇ ರಮ್ಯಾಗೆ ಒಂದಷ್ಟು ನಿರೀಕ್ಷೆ ಹಾಗೂ ಭರವಸೆ ಇದೆ. ಈ ವರ್ಷ ಮತ್ತೊಮ್ಮೆ ನಂಬರ್ ಒನ್ ನಟಿ ಪಟ್ಟ ಗಿಟ್ಟಿಸಿಕೊಳ್ಳಬಹುದೆಂಬ ವಿಶ್ವಾಸವೂ ಅವರಿಗೆ ಇದೆಯಂತೆ.
ತಮಗೆ ಹಿಡಿಸದೇ ಇರೋದನ್ನು ತಮಗನಿಸಿದ ಹಾಗೆಯೇ ನೇರವಾಗಿ ಹೇಳಿ ಬಿಡುತ್ತಾರಂತೆ ರಮ್ಯಾ. ತನ್ನ ತಪ್ಪಿಲ್ಲದಿದ್ದಾಗ ತನ್ನ ಪರ ವಾದಿಸಲು ರಮ್ಯಾಗೆ ಯಾರೂ ಬೇಡವಂತೆ. ತಾನೊಬ್ಬಳೇ ಏಕಾಂಗಿಯಾಗಿ ಹೋರಾಡುವುದಾಗಿ ಹೇಳುತ್ತಾರೆ ರಮ್ಯಾ. ರಮ್ಯಾ 'ಮಂಡ್ಯದ ಹೆಣ್ಣು' ಅಂತೀರಾ!!!