ತೆರೆಯ ಹಿಂದೆ ದುಡಿಯುವ ನಿರ್ದೇಶಕ, ನಿರ್ಮಾಪಕ, ಸಾಹಸ ನಿರ್ದೇಶಕ, ಛಾಯಾಗ್ರಾಹಕ ಮುಂತಾದವರು ತಮ್ಮ ನೆಚ್ಚಿನ ನಟನೊಂದಿಗೆ ದೃಶ್ಯ ಅಥವಾ ಹಾಡೊಂದರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ.
ಹೀಗೆ ತೆರೆ ಕಾಣಿಸಿಕೊಳ್ಳುವ ತೆರೆ ಹಿಂದಿನವರ ಸಾಲಿಗೆ ನಿರ್ಮಾಪಕರಾದ ಸೂರಪ್ಪ ಬಾಬು ಹಾಗೂ ಎನ್.ಎಸ್.ರಾಜ್ ಕುಮಾರ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ತಾವೇ ನಿರ್ಮಾಣ ಮಾಡುತ್ತಿರುವ 'ಪೃಥ್ವಿ' ಚಿತ್ರದ ಹಾಡಿನ ದೃಶ್ಯವೊಂದರಲ್ಲಿ ಈ ನಿರ್ಮಾಪಕರಿಬ್ಬರು ಕಾಣಿಸಿಕೊಂಡು ನಟ ಪುನೀತ್ ರಾಜ್ ಕುಮಾರ್ ಅವರ ಕೈ ಕುಲುಕಿ ಹೋಗುತ್ತಾರೆ. ಈ ಚಿತ್ರದ ನಿರ್ದೇಶಕರು ಜೇಕಬ್ ವರ್ಗೀಸ್ ಹಾಗೂ ನಾಯಕಿಯಾಗಿ ಪಾರ್ವತಿ ಮೆನನ್ ಕಾಣಿಸಿಕೊಂಡಿದ್ದಾರೆ.