ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿರುವ ನಟಿಯೆಂದರೆ ವಿನಯಾ ಪ್ರಸಾದ್. ಅವರು ಮುಂದಿನ ತಮ್ಮ ಜೀವನದಲ್ಲಿ ಎರಡು ಸಾಧನೆಗಳನ್ನು ಮಾಡಬೇಕು ಎಂದುಕೊಂಡಿದ್ದಾರಂತೆ.
ಅದೇನಪ್ಪಾ ಎಂದರೆ, ಒಂದು ತಾವೇ ಸಿನಿಮಾ ನಿರ್ದೇಶನ ಮಾಡುವುದು. ಮತ್ತೊಂದು ಕಥಕ್ ಮತ್ತು ಭರತ ನಾಟ್ಯ ಕಲಿಯುತ್ತಿರುವ ತಮ್ಮ ಪುತ್ರಿ ಪ್ರಥಮಾ ಪ್ರಸಾದ್ ಅವರಿಗೊಂದು ನೃತ್ಯ ಶಾಲೆ ನಿರ್ಮಿಸಿಕೊಡುವುದು.
ಚಿತ್ರ ನಿರ್ದೇಶಿಸಬೇಕೆಂದು ವಿನಯಾ ಅದಾಗಲೇ 20 ಕಥೆಗಳನ್ನು ತಮ್ಮ ಬಳಿ ಇಟ್ಟು ಕೊಂಡಿದ್ದಾರಂತೆ. ಅದರಲ್ಲಿ ಒಂದು ಕಥೆ ನಟ ಗಣೇಶ್ ಅವರಿಗೆ ಹೋಲುತ್ತದೆ ಎನ್ನುತ್ತಾರೆ ಅವರು. ಎಲ್ಲವೂ ಅಂದುಕೊಂಡಂತೆ ಆದರೆ ಕನ್ನಡಕ್ಕೆ ಮತ್ತೊಬ್ಬ ನಿರ್ದೇಶಕಿಯ ಆಗಮನವಾದಂತಾಗುತ್ತದೆ.