ಸಾಹಸಮಯ ಚಿತ್ರಗಳ ನಿರ್ದೇಶಕ ಓಂ ಪ್ರಕಾಶ್ ರಾವ್ ಹುಲಿ ಬೇಟೆಗೆ ತಯಾರಾಗಿದ್ದಾರೆ! ಇದೇನಪ್ಪಾ ಸಿನೆಮಾ ಬಿಟ್ಟು ಹುಲಿ ಬೇಟೆ ಅಂತ ರಾಗ ತೆಗಿತಿದ್ದೀರಲ್ಲ ಎಂದುಕೊಂಡಿರಾ? 'ಎ.ಕೆ. 56' ಚಿತ್ರದ ನಂತರ ಓಂ ಪ್ರಕಾಶ್ 'ಹುಲಿ' ಹೆಸರಿನ ಚಿತ್ರದ ಸಿದ್ಧತೆಯಲ್ಲಿದ್ದಾರೆ.
ಸುಧೀರ್ ಎಂಬುವವರು ಈ ಚಿತ್ರದ ನಿರ್ಮಾಪಕರು. ಖಳನಾಯಕ, ಪೋಷಕ ಪಾತ್ರಗಳಲ್ಲೇ ಹೆಚ್ಚು ಮಿಂಚುತ್ತಿದ್ದ ನಟ ಕಿಶೋರ್ ಈ ಚಿತ್ರದ ಹುಲಿ. ಅಂದರೆ ನಾಯಕ ನಟ. ಅನೂಪ್ ಸಿಳೀನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.
ಈ ಚಿತ್ರದಲ್ಲಿ ನಾಯಕಿಗೆ ಪತ್ರಕರ್ತೆಯ ಪಾತ್ರ. ಆದರೆ ನಾಯಕಿಯ ಆಯ್ಕೆ ಇನ್ನೂ ನಡೆದಿಲ್ಲ. ಏನೇ ಆದರೂ ನಾಯಕಿಯ ಪಟ್ಟ ವೀರ ಕನ್ನಡಿಗಳಿಗೆ ಮಾತ್ರ ಎಂಬುದು ಓಂ ಪ್ರಕಾಶ್ ಅವರ ಅಭಿಪ್ರಾಯ.