ಪವರ್ ಸ್ಟಾರ್ ಅಪ್ಪು ಅಭಿಮಾನಿಗಳಿಗೊಂದು ಸಂತೋಷದ ಸುದ್ದಿ. ಕೇವಲ ಬೆಳ್ಳಿ ಪರದೆಯ ಮೇಲಷ್ಟೇ ಕಾಣಿಸಿಕೊಳ್ಳುತ್ತಿದ್ದ ಪುನೀತ್, ಇನ್ನು ಮುಂದೆ ವಾರದಲ್ಲಿ ಒಮ್ಮೆ ಕಿರು ಪರದೆಯ ಮೇಲೆ ವಿಜೃಂಭಿಸಲಿದ್ದಾರೆ.
ಕನ್ನಡದ ಖ್ಯಾತ ವಾಹಿನಿಯ ನೃತ್ಯ ಕಾರ್ಯಕ್ರಮವೊಂದಕ್ಕೆ ಪುನೀತ್ ರಾಯಭಾರಿಯಾಗಿದ್ದಾರೆ. ಕಾರ್ಯಕ್ರಮದ ಹೆಸರು 'ಧೀ'. ಪುನೀತ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷ.
ಈ ಬೃಹತ್ ನೃತ್ಯ ಹಣಾಹಣಿಯ ತೀರ್ಪುಗಾರರಾಗಿ ಖ್ಯಾತ ನೃತ್ಯ ನಿರ್ದೇಶಕರಾದ ಇಮ್ರಾನ್, ಹರ್ಷ ಮತ್ತು ಮಾಲೂರು ಶ್ರೀನಿವಾಸ್ ಪಾಲ್ಗೊಂಡಿದ್ದಾರೆ. ಅದಾಗಲೇ ಈ ಕಾರ್ಯಕ್ರಮದ ಎರಡು ಕಂತುಗಳು ಟಿವಿಯಲ್ಲಿ ಮೂಡಿ ಬಂದಿದೆ.