ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕವಿರಾಜ್ ಎಂಬ ಕನ್ನಡ ಸಿನಿಮಾದ ಕವಿ (Kaviraj | Jayanth Kaykini | Yogaraj Bhat)
ಸುದ್ದಿ/ಗಾಸಿಪ್
Bookmark and Share Feedback Print
 
ಸದ್ಯ ಕನ್ನಡ ಚಿತ್ರರಂಗದಲ್ಲಿ ಸೊಗಸಾದ ಹಾಡುಗಳು ಮೂಡಿ ಬರುವಲ್ಲಿ ಇಬ್ಬರು ಸಾಹಿತಿಗಳ ಶ್ರಮದ ದುಡಿಮೆ ಈ ಯಶಸ್ಸಿನ ಹಿಂದಿದೆ. ಈ ಇಬ್ಬರ ಪೈಕಿ ಒಬ್ಬರು ಜಯಂತ ಕಾಯ್ಕಿಣಿಯಾದರೆ, ಇನ್ನೊಬ್ಬರು ಕವಿರಾಜ್.

ಪ್ರೀತಿ ಪ್ರೇಮಕ್ಕೆ ಸಂಬಂಧಪಟ್ಟಂತೆ ಹಾಡು ಬರೆಯುವುದರಲ್ಲಿ ಕಾಯ್ಕಿಣಿ ಕಿಂಗ್ ಆಗಿಬಿಟ್ಟಿದ್ದಾರೆ. ನಮ್ಮ ಮುಂಗಾರು ಮಳೆ ಸುರಿಸಿದ ಯೋಗರಾಜ ಭಟ್ಟರು ಕೂಡಾ ಗೀತಸಾಹಿತ್ಯದಲ್ಲಿ ಎತ್ತಿದ ಕೈ. ಆಗಿಗ ಪುರುಸೊತ್ತು ಇರುವಾಗಲೆಲ್ಲ ಮಸ್ತ್ ಹಾಡುಗಳನ್ನು ಇತರ ಚಿತ್ರಗಳಿಗೆ ಬರೆದುಕೊಟ್ಟು ಜನಮನ ಗೆದ್ದಿದ್ದಾರೆ. ಅದೆಲ್ಲಾ ಒತ್ತಟ್ಟಿಗಿರಲಿ. ಸುದೀಪ್ ಅಭಿನಯದ ವೀರ ಮದಕರಿ ಚಿತ್ರದ 'ಜುಮ್ ಜುಮ್ ಮಾಯ..' ಹಾಡನ್ನು ಕೇಳಿ ನಮ್ಮ ಹಂಸಲೇಖ ಖುಷಿಯಾಗಿ ಸಾಹಿತ್ಯ ರಚಿಸಿದ ಕವಿರಾಜ್ ಅವರಿಗೆ ಕರೆ ಮಾಡಿ ರಾತ್ರಿ 12 ಗಂಟೆಗೆ ಅಭಿನಂದನೆ ಸಲ್ಲಿಸಿದ್ದರಂತೆ.

2009ರಲ್ಲಿ ಕವಿರಾಜ್ 73 ಹಾಡುಗಳನ್ನು ಬರೆದು ಪುಟ್ಟ ದಾಖಲೆಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದರು. ಪರಿಚಯ ಮತ್ತು ಸವಾರಿ ಚಿತ್ರದ ಹಾಡುಗಳು ಇನ್ನೂ ಜನರ ಮನಸ್ಸಿಂದ ಮಾಸಿಲ್ಲ. ಇದರ ನಡುವೆ ಆರ್.ಎನ್.ಜಯಗೋಪಾಲ್ ಪುರಸ್ಕಾರವನ್ನು ಕವಿರಾಜ್ ಅವರಿಗೆ ನೀಡಲಾಯಿತು. ಇದು 2009ರ ಕವಿರಾಜ್ ಅವರ ಸಾಧನೆಗಳು. 2010ರಲ್ಲಿ ಈ ಕವಿಯಿಂದ ಇನ್ನಷ್ಟು ಹಾಡುಗಳು ಹರಿದುಬರಲೆಂದು ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕವಿರಾಜ್, ಜಯಂತ ಕಾಯ್ಕಿಣಿ, ಯೋಗರಾಜ ಭಟ್