ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಗ್ನಿನಕ್ಷತ್ರಂ ರಿಮೇಕಿನಲ್ಲಿ ಪ್ರಜ್ಞಾ, ಶರ್ಮಿಳಾ? (Agni Nakshatram | Prajna | Sharmila Mandre | Prajwal | Adithya)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಿರ್ದೇಶಕ ಮಣಿರತ್ನಂ ತಯಾರು ಮಾಡಿದ ಹಿಟ್ ಚಿತ್ರ ಅಗ್ನಿನಕ್ಷತ್ರಂ ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಇಲ್ಲಿ ಈ ಚಿತ್ರವನ್ನು ಚಿ.ಗುರುದತ್ ನಿರ್ದೇಶಿಸಲಿದ್ದಾರೆ. ಅದಕ್ಕಾಗಿ ಗುರು, ಶ್ರದ್ದೆಯಿಂದ ಚಿತ್ರಕಥೆಯನ್ನೂ ಸಿದ್ಧಪಡಿಸುತ್ತಿದ್ದಾರಂತೆ.
MOKSHA


ಈ ಚಿತ್ರದಲ್ಲಿ ಆದಿತ್ಯ ಮತ್ತು ಪ್ರಜ್ವಲ್ ನಾಯಕನಟರಾಗಿ ನಟಿಸಲಿದ್ದಾರೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಹಾಗೂ ನಾಯಕಿಯರಿಬ್ಬರ ತಲಾಷ್ ಮಾಡುತ್ತಿರುವುದಾಗಿ ಹೇಳಲಾಗಿತ್ತು. ಗಾಂಧಿನಗರದ ಮಂದಿಯ ಪ್ರಕಾರ, ಈ ಚಿತ್ರಕ್ಕೆ ಇಬ್ಬರು ಕನ್ನಡದ ಬೆಡಗಿಯರೇ ಸೆಟ್ಟಾಗಿದ್ದಾರೆ ಎನ್ನಲಾಗುತ್ತಿದೆ. ಶರ್ಮಿಳಾ ಮಾಂಡ್ರೆ ಮತ್ತು ಪ್ರಜ್ಞಾ ಅವರೇ ಈ ನಾಯಕಿಯರ ಸ್ಥಾನ ತುಂಬುತ್ತಾರೆಂಬುದು ಈಗ ಸುದ್ದಿ.

ಆದರೆ ನಿರ್ದೇಶಕ ಗುರುದತ್ ಈ ಸುದ್ದಿಯನ್ನು ಖಚಿತಪಡಿಸದೇ ನಿರ್ಮಾಪಕರ ಸುಪರ್ದಿಗೆ ಬಿಟ್ಟುಬಿಟ್ಟಿದ್ದಾರೆ. ಒಟ್ಟಾರೆ ಮುಂದಿನ ವಾರದೊಳಗೆ ಇಬ್ಬರು ನಟಿಮಣಿಯರು ಯಾರೆಂಬುದು ತಿಳಿಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಗ್ನಿ ನಕ್ಷತ್ರಂ, ಪ್ರಜ್ಞಾ, ಶರ್ಮಿಳಾ ಮಾಂಡ್ರೆ, ಪ್ರಜ್ವಲ್, ಆದಿತ್ಯ