ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮ್, ರಕ್ಷಿತಾರ ಜೋಗಯ್ಯನಿಗೆ ಅಬ್ಬರದ ಪ್ರಚಾರ (Prem | Rakshitha | Jogayya)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಬರುವ ಏಪ್ರಿಲ್ 24ಕ್ಕೆ ಡಾ.ರಾಜ್ ಕುಮಾರ್ ಅವರ ಜನುಮದಿನ. ಅದೇ ದಿನದಂದು ಪ್ರೇಮ್ ನಿರ್ದೇಶನದ ಜೋಗಯ್ಯನಿಗೂ ಮುಹೂರ್ತ!

ಪ್ರೇಮ್ ತಾವು ಹಿಡಿದ ಯಾವುದೇ ಚಿತ್ರಕ್ಕೆ ಭಯಂಕರ ಪ್ರಚಾರ ಮಾಡುವುದು ಸಂಪ್ರದಾಯ. ಅದರಲ್ಲೂ ತಮ್ಮದೇ ಬ್ಯಾನರಿನಲ್ಲಿ ತಯಾರಿಸುತ್ತಿರುವ ಜೋಗಯ್ಯ ಚಿತ್ರಕ್ಕೆ ಇನ್ಯಾವ ಪರಿ ಪ್ರಚಾರ ಮಾಡಬಹುದು ನೀವೇ ಊಹಿಸಿ.

ನಗರದ ಅರಮನೆ ಆವರಣದಲ್ಲಿ ಅದ್ದೂರಿಯಾಗಿಯೇ ಜೋಗಯ್ಯ ಚಿತ್ರ ಸೆಟ್ಟೇರಲಿದೆಯಂತೆ. ಅದೇ ದಿನ ಜೋಗಯ್ಯನ ಗೆಟಪ್ ಕೂಡ ಪರಿಚಯಿಸುತ್ತಾರಂತೆ ಪ್ರೇಮ್. ಈ ಚಿತ್ರಕ್ಕೆ ಮುಂಬೈನಿಂದ ನಾಯಕಿ ನಟಿಯನ್ನು ಕರೆತರಿಸಬೇಕೆಂಬ ಆಸೆಯಲ್ಲಿದ್ದಾರೆ ಪ್ರೇಮ್. ಈ ಹಿಂದೆ ಪ್ರಿಯಾಂಕಾ ಛೋಪ್ರಾಳನ್ನು ಐಟಂ ಸಾಂಗೊಂದರಲ್ಲಿ ಕುಣಿಸಿ ವಿದ್ಯಾ ಬಾಲನ್ ಅವರನ್ನು ನಾಯಕಿಯಾಗಿ ಕರೆತರುವ ಬಗ್ಗೆ ಸುಳಿವ ನೀಡಿದ್ದ ಪ್ರೇಮ್ ಈ ಬಾರಿ ಹೆಚ್ಚಿನ ಮಾಹಿತಿಯನ್ನೇನೂ ನೀಡಿಲ್ಲ.

ಪ್ರೇಮ್ ಪತ್ನಿ, ನಟಿ ರಕ್ಷಿತಾ ಈ ಚಿತ್ರದ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಶಿವಣ್ಣನ 100ನೇ ಚಿತ್ರ ಜೋಗಯ್ಯ ನಿರ್ಮಿಸುತ್ತಿರುವುದು ಹೆಮ್ಮೆಯ ವಿಷಯ ಎನ್ನುತ್ತಾರೆ ರಕ್ಷಿತಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೇಮ್, ರಕ್ಷಿತಾ, ಜೋಗಯ್ಯ