ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತೇನೆಂದು ಹೇಳುತ್ತಿದ್ದ ನಟಿ ಪೂಜಾ ಗಾಂಧಿ ಕೊನೆಗೂ ಇದೀಗ ದಿಢೀರನೆ ಹೊಸ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. ಪೂಜಾಳೇ ನಾಯಕಿಯಾಗಿದ್ದ 'ಅನು' ಚಿತ್ರದ ನಿರ್ದೇಶಕರಾಗಿದ್ದ ಶಿವಗಣಪತಿ ಈ ಹೊಸ ಚಿತ್ರದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಚಿನ್ನಪಾಟಿ ನಾಗಮಲ್ಲೇಶ್ವರ ಎಂಬುವವರು ಈ ಚಿತ್ರದ ನಿರ್ಮಾಪಕರು.
MOKSHA
ಎಲ್ಲಾ ಓಕೆ, ಆದರೆ ಚಿತ್ರದ ನಾಯಕ ನಟ ಯಾರೆಂಬುದು ನಿಮ್ಮ ಪ್ರಶ್ನೆಯೇ? ಹಾಗಾದ್ರೆ ಕೇಳಿ. 'ಸವಾರಿ' ಚಿತ್ರದಲ್ಲಿ ಅದ್ಬುತವಾಗಿ ನಟಿಸಿ ಚಿತ್ರರಸಿಕರ ಮನಗೆದ್ದ ಹ್ಯಾಂಡ್‌ಸಂ ಹುಡುಗ ರಘು ಮುಖರ್ಜಿ ಈ ಹೊಸ ಚಿತ್ರದಲ್ಲಿ ಪೂಜಾಳಿಗೆ ಜೋಡಿಯಾಗಿ ನಟಿಸಲಿದ್ದಾರೆ.
ಶಿವಗಣಪತಿ ಅವರ ಅನು ಚಿತ್ರ ಪಕ್ಕಾ ರಿಮೇಕ್ ಚಿತ್ರವಾಗಿತ್ತು. ಆದರೆ ಇದೀಗ ಮಾಡಲಿರುವ ಈ ಹೊಸ ಚಿತ್ರ ಸತ್ಯವಾಗಲೂ ಸ್ವಮೇಕ್ ಎನ್ನುತ್ತಾರೆ ಗಣಪತಿ. ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲದ ಜನ ಏನೇನಲ್ಲ ಮಾಡುತ್ತಾರೆ ಎಂಬ ಅಂಶಗಳೂ ಈ ಕಥೆಯಲ್ಲಿ ಹಾಸುಹೊಕ್ಕಾಗಿದ್ದು, ಹೆಣ್ಣಿನ ಪಾತ್ರದ ಮೂಲಕ ಇದಕ್ಕೆ ಪರಿಹಾರ ಸೂಚಿಸಲಿದ್ದಾರಂತೆ ಗಣಪತಿ.