ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಲಾತ್ಮಕ ಚಿತ್ರಗಳಿಗೆ ಬೆಲೆಯಿಲ್ಲವೆಂಬ ಕೊರಗು (P.Sheshdri | Vimukthi | National award)
ಸುದ್ದಿ/ಗಾಸಿಪ್
Bookmark and Share Feedback Print
 
ನಿರ್ದೇಶಕ ಶೇಷಾದ್ರಿಯವರಿಗೆ ಇತ್ತೀಚೆಗೆ ರಾಷ್ಟ್ರಪ್ರಶಸ್ತಿ ದೊರೆಯಿತು. ಆದರೆ ಪ್ರಶಸ್ತಿ ಸಿಕ್ಕ ಸಂತೋಷಕ್ಕಿಂತ ಅವರಲ್ಲಿ ಕಲಾತ್ಮಕ, ಅರ್ಥಪೂರ್ಣ ಚಿತ್ರಗಳಿಗೆ ಥಿಯೇಟರ್ ಸಿಗುತ್ತಿಲ್ಲ ಎಂಬ ಬೇಸರ ಮನದಲ್ಲಿ ಮೂಡಿದೆ.

ಕಲಾತ್ಮಕ, ಅರ್ಥಪೂರ್ಣ ಚಿತ್ರಗಳಿಗೆ ಥಿಯೇಟರ್ ಸಿಗಬೇಕು. ಅದರಲ್ಲೂ ರಿಯಾಯಿತಿ ದರದಲ್ಲೇ ಸಿಗಬೇಕು ಎಂದು ಶೇಷಾದ್ರಿ ತಮ್ಮ ವಾದವನ್ನು ಮುಂದಿಡುತ್ತಾರೆ. ಪಿವಿಆರ್ ಚಿತ್ರಮಂದಿರದಲ್ಲಿ ಕನ್ನಡಿಗ ಕನ್ನಡ ಸಿನಿಮಾಗೆ ಹೋದಾಗ ಅಲ್ಲಿ ಮುಜುಗರ ಪಡುವ ಪ್ರಸಂಗ ಎದುರಾಗಬಾರದು ಎನ್ನುವ ಶೇಷಾದ್ರಿಯವರ ಮಾತಿನಲ್ಲಿ ಸತ್ಯ ಮತ್ತು ಸತ್ವ ಎರಡೂ ಇದೆ ಎಂದೆನಿಸುತ್ತದೆ.

ಇದೀಗ ಜಯನಗರದ ಪುಟ್ಟಣ್ಣ ಚಿತ್ರಮಂದಿರ ಸುಖಾ ಸುಮ್ಮನೆ ಮುಚ್ಚಲಾಗಿದೆ. ಈ ಹಿಂದೆ ಹಲವು ಬಾರಿ ಈ ಚಿತ್ರಮಂದಿರವನ್ನು ಕಲಾತ್ಮಕ ಚಿತ್ರಗಳ ಬಿಡುಗಡೆಗೆ ಬಿಟ್ಟುಬಿಡಿ ಎನ್ನಲಾಗಿತ್ತು. ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಇನ್ನಾದರೂ ಈ ಚಿತ್ರಮಂದಿರದತ್ತ ಸಂಬಂಧಪಟ್ಟವರು ಗಮನಿಸಿದರೆ ಅರ್ಥಪೂರ್ಣವಾದೀತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೇಷಾದ್ರಿ, ವಿಮುಕ್ತಿ, ರಾಷ್ಟ್ರಪ್ರಶಸ್ತಿ, ಕಲಾತ್ಮಕ ಸಿನಿಮಾ