ಹಾಲಿವುಡ್ ಚಿತ್ರಗಳಲ್ಲಿ ಚಿಂಪಾಂಜಿಯ ಸಿನಿಮಾಗಳು ಬೇಕಾದಷ್ಟು ಬಂದು ಹೋಗಿವೆ. ಆದರೆ ಕನ್ನಡದಲ್ಲಿ ಇಂತಹ ಪ್ರಯತ್ನಗಳು ಇನ್ನೂ ನಡೆದಿರಲಿಲ್ಲ. ಇದೀಗ ನಮ್ಮಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಆ ಸಾಹಸಕ್ಕೆ ಕೈ ಹಾಕಿದ್ದಾರೆ.
ಇದು ಒಬ್ಬ ಬಾಲಕ ಹಾಗೂ ಪ್ರಾಣಿಯೊಂದರ ಕಥೆ. ಚಿತ್ರದ ನಾಯಕರು ಇಬ್ಬರು. ಒಬ್ಬ ಅದೇ ಚಿತ್ರದ ನಿರ್ಮಾಪಕರಾದ ಸೌಂದರ್ಯ ಜಗದೀಶರ ಪುತ್ರ ಮಾಸ್ಟರ್ ಸ್ನೇಹಿತ್ ಮತ್ತೊಬ್ಬ ನಾಯಕ ನಟ ಒರಂಗುಟಾನ್ ಹೆಸರಿನ ಚಿಂಪಾಂಜಿ.
ಕಳೆದ ಸೆಪ್ಟಂಬರಿನಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಚಿಂಪಾಂಜಿಯ ಹುಡುಕಾಟದಲ್ಲೇ ಕಾಲ ಹರಣವಾಯ್ತು. ಕೊನೆಗೂ ಒರಂಗುಟಾನ್ ಸಿಕ್ಕ ಮೇಲೆ ಕಾಂಬೋಡಿಯಾದಲ್ಲಿ ಚಿತ್ರೀಕರಣ ಪ್ರಾರಂಭಿಸಲಾಯಿತು.
ಈ ಚಿತ್ರಕ್ಕೆ ಕೃಷ್ಣ ಅವರ ಛಾಯಾಗ್ರಹಣ, ಹಂಸಲೇಖರ ಸಾಹಿತ್ಯ ಕಂ ಸಂಗೀತ, ರಾಂನಾರಾಯಣರ ಸಂಭಾಷಣೆ, ಪಳನಿರಾಜ್ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.