ಶಿವಣ್ಣ ಮಾಲೆ ಧರಿಸಿದ್ದಾರೆ. ಮೆಚ್ಚಿನ ನಟನಿಗೆ ಅಭಿಮಾನಿಗಳು ಮಾಲೆ ಹಾಕುವುದು ಮಾಮೂಲಿ ಎಂದುಕೊಂಡಿರಾ? ಇದು ಹೂವಿನ ಮಾಲೆಯಲ್ಲ. ಶಿವಣ್ಣ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕಾಗಿ ಮಾಲೆ ಧರಿಸಿದ್ದಾರೆ.
ಇತ್ತೀಚೆಗೆ ನಗರದ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅವರು ಮಾಲೆ ಧರಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಗೀತಾ ಕೂಡಾ ಉಪಸ್ಥಿತರಿದ್ದರು.
ವಿಶೇಷವೆಂದರೆ ಶಿವಣ್ಣ ಅಯ್ಯಪ್ಪನ ದರ್ಶನಕ್ಕಾಗಿ ತೊಟ್ಟ ಬಟ್ಟೆ ಡಾ.ರಾಜ್ ಅವರದ್ದು. ಈ ಹಿಂದೆ ಶಿವಣ್ಣ ಅನೇಕ ಬಾರಿ ಶಬರಿಮಲೈಗೆ ಹೋಗಿದ್ದರು. ಆದರೆ ತಮ್ಮ ತಂದೆಯ ಬಟ್ಟೆ ಧರಿಸಿಕೊಂಡು ಯಾತ್ರೆ ಮಾಡುತ್ತಿರುವುದು ಇದೇ ಮೊದಲಂತೆ. ಅಂದಹಾಗೆ ಶಿವಣ್ಣನೊಂದಿಗೆ ಪುನೀತ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಸಹ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದಾರೆ.