ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸದ್ದಿಲ್ಲದೆ ಚಿತ್ರವೊಂದನ್ನು ಮುಗಿಸಿದ ಥ್ರಿಲ್ಲರ್ ಮಂಜು (Thriller Manju | Jaya he | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕನ್ನಡ ಚಿತ್ರರಂಗದಲ್ಲಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವೆಂದರೆ ಆ ಚಿತ್ರದ ಬಗ್ಗೆ ಸಾಹಸ ಪ್ರಿಯರಿಗೊಂದು ಥ್ರಿಲ್ ಇರುತ್ತದೆ ಎಂಬ ಮಾತಿದೆ. ಇವರ ಸಾಹಸ ನಿರ್ದೇಶನದ ಎಷ್ಟೋ ಚಿತ್ರಗಳಲ್ಲಿ ಸಾಹಸವೇ ಪ್ರಧಾನ ಅಂಶವಾಗಿ ಆ ಚಿತ್ರಗಳು ಯಶಸ್ವಿಯಾಗಿವೆ.

ಆ ನಂತರ ಮಂಜು ಹಲವಾರು ಚಿತ್ರಗಳಲ್ಲಿ ನಾಯಕರಾಗುವುದರೊಂದಿಗೆ ನಿರ್ದೇಶನವನ್ನೂ ಕೂಡಾ ಮಾಡಿದ್ದಾರೆ. ಈಗ ಇದೇ ಥ್ರಿಲ್ಲರ್ ಮಂಜು ಮತ್ತೆ ಸದ್ದಿಲ್ಲದೆ ಸಾಹಸ ಹಾಗೂ ಸೆಂಟಿಮೆಂಟಿನಿಂದ ಕೂಡಿದ ಒಂದು ಚಿತ್ರವನ್ನು ನಿರ್ದೇಶಿಸಿ ಪೂರ್ಣಗೊಳಿಸಿದ್ದಾರಂತೆ. ಈ ಚಿತ್ರದ ಹೆಸರು ಜಯ ಹೇ.

45 ದಿನಗಳ ಕಾಲ ಬೆಂಗಳೂರು, ಮಂಗಳೂರು, ಬ್ಯಾಂಕಾಕ್, ಹಾಂಕಾಂಗ್‌ಗಳಲ್ಲಿ ಚಿತ್ರೀಕರಣ ಮುಗಿಸಿದ್ದಾರೆ. ಕಮಲ್ ಸಾರಥಿ ಸಂಭಾಷಣೆ, ಜನಾರ್ದನ್ ಬಾಬು ಛಾಯಾಗ್ರಹಣ, ಕೃಪಾಕರ್ ಸಂಗೀತ ಇರುವ ಈ ಚಿತ್ರದ ಕಥೆ, ಚಿತ್ರಕಥೆ, ಸಾಹಸ, ಸಾಹಿತ್ಯ ಎಲ್ಲವೂ ಥ್ರಿಲ್ಲರ್ ಮಂಜು ಅವರದ್ದೇ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸದ್ದಿಲ್ಲದೆ ಚಿತ್ರವೊಂದನ್ನು ಮುಗಿಸಿದ ಥ್ರಿಲ್ಲರ್ ಮಂಜು