ಕನ್ನಡ ಚಿತ್ರರಂಗದ ಅಮೋಘ ಪ್ರತಿಭೆ ದಿವಂಗತ ಶಂಕರ್‌ನಾಗ್ ಹಾಗೂ ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಅವರ ಪುತ್ರಿ ಕಾವ್ಯಾ ಹಸೆಮಣೆ ಏರಿದ್ದಾರೆ. ಜನವರಿ 25ರಂದು ಕಾವ್ಯಾ ಚಿತ್ರರಂಗದ ಗಣ್ಯಾತಿಗಣ್ಯರ ಸಮೂಹದಲ್ಲಿ ತಮ್ಮ ಬಾಲ್ಯದ ಗೆಳೆಯ ಸಲೀಲ್ ಅವರನ್ನು ವಿವಾಹವಾದರು.
ಹೊಸೂರು ರಸ್ತೆಯ ಮಣಿಪಾಲ್ ಕಂಟ್ರಿ ರೆಸಾರ್ಟ್‌ನಲ್ಲಿ ನಡೆದ ಈ ವಿವಾಹಕ್ಕೆ ಚಿತ್ರರಂಗದ ಗಣ್ಯರಾದ ದೊಡ್ಡಪ್ಪ ಅನಂತನಾಗ್, ನಟ ರಮೇಶ್ ಅರವಿಂದ್, ಶ್ರೀನಾಥ್, ಅಂಬರೀಷ್, ನಟಿ ಸುಮಲತಾ, ಸಾಹಿತಿ ಗಿರೀಶ್ ಕಾರ್ನಾಡ್, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಸೇರಿದಂತೆ ರಂಗಭೂಮಿ ಕಲಾವಿದರು ಹಾಗೂ ಚಿತ್ರರಂಗದ ಖ್ಯಾತನಾಮರು ಹಾಜರಾಗಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು.
ಸಲೀಲ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಕಾವ್ಯ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಇಬ್ಬರೂ ಇದೀಗ ಉನ್ನತ ವ್ಯಾಸಂಗಕ್ಕಾಗಿ ಶೀಘ್ರದಲ್ಲೇ ಇಂಗ್ಲೆಂಡಿಗೆ ಹಾರಲಿದ್ದಾರೆ.