ನಿರ್ದೇಶಕ ಕೂಡ್ಲು ರಾಮಕೃಷ್ಣ ಇದೀಗ ಬಿಳುಮನೆ ರಾಮದಾಸ್ ಅವರ ಕಾದಂಬರಿಯನ್ನು ಚಿತ್ರ ಮಾಡಲು ಹೊರಟಿದ್ದಾರೆ. ನಿರ್ದೇಶಕರು ತಮ್ಮ ಚಿತ್ರಕ್ಕೆ ಕರಾವಳಿ ಹುಡುಗಿ ಎಂದು ನಾಮಕರಣವನ್ನೂ ಮಾಡಿದ್ದಾರೆ.
ದಲಿತ ಹುಡುಗಿಯೊಬ್ಬಳ ಬದುಕು, ಛಲ, ಎದುರಾಗುವ ಸಮಸ್ಯೆಗಳು ಹಾಗೂ ಆಕೆ ಅನುಭವಿಸುವ ಕಿರುಕುಳ ಮತ್ತು ಅದನ್ನು ಆಕೆ ಹೇಗೆ ಎದುರಿಸುತ್ತಾಳೆ ಎಂಬುದನ್ನು ಚಿತ್ರದಲ್ಲಿ ಸೊಗಸಾಗಿ ತೋರಿಸುವುದಾಗಿ ಕೂಡ್ಲು ಹೇಳಿಕೊಳ್ಳುತ್ತಾರೆ.
ಕೂಡ್ಲು ರಾಮಕೃಷ್ಣ ತಮ್ಮ ನಿರ್ದೇಶನದಲ್ಲಿ ಒಟ್ಟು 22 ಚಿತ್ರಗಳನ್ನು ಮಾಡಿದ್ದಾರೆ. ಅವುಗಳಲ್ಲಿ 14 ಕಾದಂಬರಿ ಆಧಾರಿತ ಚಿತ್ರಗಳನ್ನೇ ಮಾಡಿದ್ದಾರೆ. ಈ ಚಿತ್ರದ ನಾಯಕ ನಟನಾಗಿ ಮೋಹನ್ ಮತ್ತು ನಾಯಕಿಯಾಗಿ ನೀತು ಅಭಿನಯಿಸಲಿದ್ದಾರೆ. ಇದೇ ಚಿತ್ರದ ದೃಶ್ಯವೊಂದರಲ್ಲಿ ಓಂಪ್ರಕಾಶ್ ರಾವ್, ದ್ವಾರಕೀಶ್ ಮತ್ತು ಜೂನಿಯರ್ ತಾರಾ ನಟಿಸಿದ್ದಾರೆ.