ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರೂಪಿಕಾ, ವಿಶ್ವಾಸರ ಕಾಲ್ಗೆಜ್ಜೆ ಘಲ್ ಘಲ್! (Roopika | Vishwas | Kalgejje | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕನ್ನಡ ಚಿತ್ರರಂಗಕ್ಕೂ ಗೆಜ್ಜೆಯ ನಂಟಿಗೂ ಇತಿಹಾಸವೇ ಇದೆ. ಈ ಹಿಂದೆ ಕನ್ನಡ ಚಿತ್ರರಂಗದ ದಿಗ್ಗಡ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಗೆಜ್ಜೆಪೂಜೆಯನ್ನು ಯಾವ ಕನ್ನಡಿಗರೂ ಮರೆಯಲು ಸಾಧ್ಯವಿಲ್ಲ. ನಟ ರಾಮ್ ಕುಮಾರ್ ಅಭಿನಯಿಸಿದ ಗೆಜ್ಜೆನಾದ ಚಿತ್ರವೂ ಸಾಕಷ್ಟು ಸುದ್ದಿ ಮಾಡಿತ್ತು. ಈಗ ಇದೇ ಗೆಜ್ಜೆ ಸಂಬಂಧಿ ಹೆಸರಲ್ಲಿ ಮತ್ತೊಂದು ಚಿತ್ರ ಸಿದ್ಧವಾಗುತ್ತಿದೆ. ಅದು ಕಾಲ್ಗೆಜ್ಜೆ.

ಹೌದು. ಅದೇ ಕಾಲ್ಗೆಜ್ಜೆ ಚಿತ್ರವನ್ನು ಬಂಗಾರು ನಿರ್ದೇಶಿಸುತ್ತಿದ್ದಾರೆ. ಇದೊಂದು ಸಂಗೀತ ಪ್ರಧಾನ ಪ್ರೇಮ ಕಥೆ. ಸಂಗೀತ ಹಾಗೂ ನಿಸರ್ಗ ಇಡೀ ಚಿತ್ರದ ಆಸ್ತಿ ಎನ್ನುತ್ತಾರೆ ಬಂಗಾರು.

ಈ ಚಿತ್ರದ ಇನ್ನೊಂದು ವಿಶೇಷವೆಂದರೆ ನಿರ್ದೇಶಕರಾದ ಎಸ್.ಮಹೇಂದರ್ ಮತ್ತು ಟಿ.ಎಸ್.ನಾಗಾಭರಣ ಹಾಗೂ ಸಂಗೀತ ನಿರ್ದೇಶಕ ವಿ.ಮನೋಹರ್ ಸ್ನೇಹ ಪೂರ್ವಕವಾಗಿ ಕಾಲ್ಗೆಜ್ಜೆಯಲ್ಲಿ ನಟಿಸಿದ್ದಾರೆ.

ಉಳಿದಂತೆ ನಾಯಕಿ ರೂಪಿಕಾ ಈ ಹಿಂದೆ ಚೆಲುವಿನ ಚಿಲಿಪಿಲಿ ಚಿತ್ರದಲ್ಲಿ ನಟಿಸಿದ್ದರೆ, ನಾಯಕ ನಟ ವಿಶ್ವಾಸ್ ಜಾಲೀಡೆಸ್ ಚಿತ್ರದಲ್ಲಿ ನಟಿಸಿದ್ದರು. ಹೀಗಾಗಿ ಹೆಚ್ಚು ಕಡಿಮೆ ಬಹುತೇಕ ಹೊಸಬರೇ ತುಂಬಿರುವ ಈ ಚಿತ್ರ ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೂಪಿಕಾ, ವಿಶ್ವಾಸ್, ಕಾಲ್ಗೆಜ್ಜೆ, ಕನ್ನಡ ಸಿನಿಮಾ