ದುನಿಯಾ ವಿಜಯ್‌ಗೊಂದು ಬಂಪರ್ ಅವಕಾಶ ಲಭಿಸಿದೆ. ಕೋಟಿ ರಾಮು ಎಂದೇ ಖ್ಯಾತಿಯ ರಾಮು ವಿಜಯ್ ಅವರನ್ನು ನಾಯಕನನ್ನಾಗಿಸಿ ಹೊಸ ಚಿತ್ರವನ್ನು ನಿರ್ಮಿಸಲಿದ್ದಾರೆ. ಈ ಹೊಸ ಚಿತ್ರಕ್ಕೆ ಕಂಠೀರವ ಎಂದು ನಾಮಕರಣ ಮಾಡಿ ಆಗಿದೆ. ಸದ್ಯ ವೀರ, ಗಂಡೆದೆ ಚಿತ್ರಗಳನ್ನು ನಿರ್ಮಿಸುತ್ತಿರುವ ರಾಮು ಈ ಹೊಸ ಚಿತ್ರವನ್ನು ನಂತರ ಕೈಗೆತ್ತಿಕೊಳ್ಳಲಿದ್ದಾರೆ.
ಅಂದಹಾಗೆ, ಈ ಕಂಠೀರವ, ತೆಲುಗು ಚಿತ್ರವಾದ ಸಿಂಹಾದ್ರಿಯ ರಿಮೇಕ್. ಇದನ್ನು ಈ ಹಿಂದೆ ರಾಮು ಬ್ಯಾನರಿನ ಗುಲಾಮ ಚಿತ್ರವನ್ನು ನಿರ್ದೇಶಿಸಿದ್ದ ತುಷಾರ್ ರಂಗನಾಥ್ ನಿರ್ದೇಶಿಸಲಿದ್ದಾರೆ.
ಕನ್ನಡದ ಕಂಠೀರವನಿಗೆ ಸೂಕ್ತ ನಾಯಕಿಯ ತಲಾಷ್ ನಡೆಯುತ್ತಿದೆ. ವಿಶೇಷವೆಂದರೆ ಈ ಚಿತ್ರಕ್ಕಾಗಿ ವಿಜಿ ಹಾಲಿವುಡ್ ಶೈಲಿಯ ಸ್ಟಂಟ್‌ಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರಂತೆ. ಅದಕ್ಕೀಗ ಹಾಲಿವುಡ್ ಚಿತ್ರಗಳನ್ನು ನೋಡೋದ್ರಲ್ಲಿ ವಿಜಯ್ ಬ್ಯುಸಿ.