ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೀಗ ಶಿವಪುಟ್ಟಸ್ವಾಮಿ ಫ್ರಂ ಸಿಂಗನಲ್ಲೂರ್ ಆಗದ್ದಾರೆ. ಅದ್ಹೇಗೆ ಶಿವಣ್ಣ ಶಿವಪುಟ್ಟಸ್ವಾಮಿ ಆದ್ರು ಅಂತೀರಾ. ವಿಷಯ ತುಂಬಾ ಸಿಂಪಲ್. ಶಿವಣ್ಣ ಮುಂದೆ ನಟಿಸುವ ಚಿತ್ರದ ಹೆಸರು ಇದು.
ಪ್ರಪಂಚ ಏಳು ಅದ್ಭುತಗಳಲ್ಲಿ ಶೂಟಿಂಗ್ ಮಾಡಿ ಇನ್ನೂ ಬಿಡುಗಡೆ ಕಾಣದ ಚೆಲುವೆಯೇ ನಿನ್ನ ನೋಡಲು ಚಿತ್ರದ ನಿರ್ಮಾಪಕ ಸುರೇಶ್ ಅವರೇ ಈ ಚಿತ್ರಕ್ಕೂ ನಿರ್ಮಾಪಕರು. ಇತ್ತೀಚೆಗೆ ಈ ವಿಚಾರವನ್ನು ಸ್ವತಃ ಸುರೇಶ್ ಅವರೇ ಬಹಿರಂಗಪಡಿಸಿದ್ದಾರೆ.
ಈಗಾಗಲೇ ಶಿವಣ್ಣ ಅವರ ಚೆಲುವೆಯೇ ನಿನ್ನ ನೋಡಲು ಚಿತ್ರ ಬಿಡುಗಡೆಗೆ ಕಾದಿದೆ. ಅದೇ ಸಂದರ್ಭ ಸುರೇಶ್ ಈ ಹೊಸ ವಿಚಾರವನ್ನು ತಾವೇ ಬಹಿರಂಗ ಪಡಿಸಿರುವುದರಿಂದ ಇದು ಕೇವಲ ಗಾಳಿಸುದ್ದಿಯಲ್ಲ, ಸತ್ಯಕ್ಕೆ ತುಂಬಾನೇ ಹತ್ತಿರ ಎನ್ನುತ್ತಿದೆ ಗಾಂಧಿನಗರ. ಚಿತ್ರಕ್ಕೆ ನಾಮಕರಣ ಮಾಡಿರುವುದೂ ನಿಜವಾಗಿದ್ದು, ಚಿತ್ರದ ಹೆಸರೂ ಕೂಡಾ 'ಶಿವಪುಟ್ಟಸ್ವಾಮಿ ಫ್ರಂ ಸಿಂಗಾನಲ್ಲೂರು' ಎಂದಾಗಿದೆ. ಇದರಲ್ಲಿ ಬದಲಾವಣೆ ಇಲ್ಲ ಎಂದು ಗಾಂಧಿನಗರ ಮಾತಾಡಿಕೊಳ್ಳುತ್ತಿದೆ.