ಶಿವಣ್ಣರ ಸುಗ್ರೀವ ಚಿತ್ರ 18 ಗಂಟೆಗಳಲ್ಲಿ ಚಿತ್ರೀಕರಣ ಮುಗಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಶಿವರಾಜ್ ಕುಮಾರ್ 15 ಅಥವಾ 14 ಗಂಟೆಯಲ್ಲಿ ಚಿತ್ರವೊಂದರ ಚಿತ್ರೀಕರಣ ಮುಗಿಸುವ ಯೋಚನೆಯಲ್ಲಿದ್ದಾರೆ.
18 ಗಂಟೆಯೊಳಗೆ ಮುಗಿದ ಸುಗ್ರೀವ ಚಿತ್ರದ ಚಿತ್ರೀಕರಣ ಶಿವಣ್ಣರಿಗೆ ಹೊಸ ಅನುಭವ ನೀಡಿದೆಯಂತೆ. ಅದೇ ರೀತಿ 14 ಅಥವಾ 15 ಗಂಟೆಯೊಳಗೆ ಮತ್ತೊಂದು ಚಿತ್ರ ಮಾಡುವ ಆಸೆ ಮತ್ತು ಯೋಚನೆ ಎರಡೂ ಇದೆಯಂತೆ.
ಈ ಚಿತ್ರ ಭಾರತದ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಬೇಕೆಂಬುದು ಶಿವಣ್ಣನ ಸದ್ಯದ ಮಹದಾಸೆಯಂತೆ. ಈ ಚಿತ್ರಕ್ಕೆ ಇನ್ನೂ ಯಾವುದೇ ರೀತಿಯ ತಯಾರಿ ಮಾಡಿಕೊಂಡಿಲ್ಲ. ಒಟ್ಟಾರೆ ಶಿವಣ್ಣ ತಾವಂದುಕೊಂಡದ್ದನ್ನು ಮಾಡುವುದು ಖಚಿತ ಎನ್ನುತ್ತಿದೆ ಗಾಂಧಿನಗರ!