ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತೆಳ್ಳಗಾಗಿ 50ಕೆಜಿವರೆಗೆ ತೂಕ ಇಳಿಸಿಕೊಂಡ ಪೂಜಾ ಗಾಂಧಿ (Pooja Gandhi | Mungaaru Male | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಪೂಜಾ ಗಾಂಧಿ ಈ ತೆಳ್ಳಗಾಗಿದ್ದಾರೆ. ಏನಪ್ಪಾ ಇದರ ಹಿಂದಿನ ರಹಸ್ಯ ಎಂದರೆ ಬಿಲ್ಕುಲ್ ಬಾಯಿಬಿಡಲ್ಲ ಈಕೆ. ಇತ್ತೀಚೆಗೆ, 'ಪೂಜಾ ಹೆಚ್ಚು ದಪ್ಪಗಾಗಿದ್ದಾರೆ, ಇದು ಹೀಗೇ ಮುಂದುವರಿದ್ರೆ ಖಂಡಿತ ಇನ್ನು ಅವಕಾಶ ಕಡಿಮೆಯಾಗಬಹುದು' ಎಂದು ಸ್ಯಾಂಡಲ್‌ವುಡ್ ಪಂಡಿತರು ಲೆಕ್ಕಾಚಾರ ಹಾಕುತ್ತಿರುವಾಗಲೇ ಪೂಜಾ ಎಚ್ಚೆತ್ತುಕೊಂಡಿದ್ದಾಳೆ. ಐದು ಕೆಜಿಯಷ್ಟು ತೂಕ ಇಳಿಸಿಕೊಂಡು ಸಣ್ಣಗಾಗಿರುವ ಪೂಜಾ ಈಗ 50 ಕೆಜಿ ತೂಕ ಹೊಂದಿದ್ದಾರೆ.

ಇಷ್ಟಕ್ಕೂ ಪೂಜಾ ಗಾಂಧಿ ತೃಪ್ತಳಾಗಿಲ್ಲ. ತಾನಿನ್ನೂ ಒಂದು ಕೆಜಿ ಇಳಿಸಬೇಕಾಗಿದೆ. 49 ಕೆಜಿ ಎಂಬುದು ಪರ್ಫೆಕ್ಟ್ ತೂಕ. ಹಾಗಾಗಿ ಇನ್ನೂ ಒಂದು ಕೆಜಿ ಇಳಿಸಲಿದ್ದೇನೆ ಎನ್ನುತ್ತಾರೆ ಈ ಪೂಜಾ.

ನಾನು ತುಂಬ ಕುಳ್ಳಗಿದ್ದೇನೆ. ಉದ್ದವಿದ್ದವರಿಗೆ ಇಂಥ ತೊಂದರೆಯಿಲ್ಲ. ನಾನು ಕೇವಲ 2 ಕೆಜಿ ಜಾಸ್ತಿಯಾದರೂ, ತುಂಬ ದಪ್ಪಗಾದಂತೆ ಕಾಣುತ್ತೇನೆ. ಮುಂಗಾರು ಮಳೆ ಚಿತ್ರದಲ್ಲಿ ನಟಿಸಿದಾಗ ನಾನು 52 ಕೆಜಿ ತೂಕ ಹೊಂದಿದ್ದೆ. ಆಮೇಲೆ ಎರಡು ವರ್ಷಗಳಲ್ಲಿ ಮೂರು ಕೆಜಿ ಜಾಸ್ತಿಯಾಗಿದ್ದೆ. ಹಾಗಾಗಿ ಈಗ ಮತ್ತೆ ಸಾಕಷ್ಟು ದೇಹ ದಂಡಿಸಿ, ಹೊಟ್ಟೆ ದಂಡಿಸಿ ಐದು ಕೆಜಿ ಕಡಿಮೆ ಮಾಡಿಕೊಂಡಿದ್ದೇನೆ ಎನ್ನುತ್ತಾಳೆ ಪೂಜಾ.

ಹೀಗಾಗಿಯೋ ಏನೋ, ಈವರೆಗೆ ಕೊಂಚ ತೂಕ ಇಳಿಸಿಕೊಂಡು ಮತ್ತೆ ಗಾಂಧಿನಗರಕ್ಕೆ ಮರಳಿರುವ ಪೂಜಾ ನಿರ್ದೇಶಕ ಶಿವಗಣಪತಿ ಅವರ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ನಾಯಕ ಸವಾರಿ ಖ್ಯಾತಿಯ ರಘು ಮುಖರ್ಜಿ. ಈ ಚಿತ್ರದ ವಿಶೇಷವೆಂದರೆ, ಚಿತ್ರದ ತಾಂತ್ರಿಕ ವರ್ಗವಿಡೀ ಅತಿ ಕಡಿಮೆ ಸಂಭಾವನೆ ಪಡೆಯುತ್ತಿದ್ದು, ಚಿತ್ರದ ನಿರ್ಮಾಣದ ಪಾಲುದಾರಿಕೆಯನ್ನೂ ಪಡೆಯುತ್ತಿದ್ದಾರೆ. ಈ ಹೊಸ ತಂತ್ರದಿಂದಾಗಿ ಚಿತ್ರ ನಿರ್ಮಾಣದ ಶೇ.40ರಷ್ಟು ಹಣ ಉಳಿತಾಯವಾಗಲಿದೆ ಎನ್ನುತ್ತದೆ ಚಿತ್ರತಂಡ. ಪೂಜಾಳ ಹೊಸ ಲುಕ್ಕಿನಿಂದ ಚಿತ್ರಕ್ಕೆ ಲಕ್ಕು ಸಿಗಲೆಂದು ಹಾರೈಸೋಣ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೂಜಾ ಗಾಂಧಿ, ಮುಂಗಾರು ಮಳೆ, ಕನ್ನಡ ಸಿನಿಮಾ