ಕುಂದಾಪುರದ ಬೆಡಗಿ ಸಂಚಿತಾ ಪಂಡುಕೋಣೆ ಇದೀಗ ತೆಲುಗು ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೊದಲು ತಮಿಳು ಚಿತ್ರರಂಗದಲ್ಲಿ ಪಳಗಿ ಆ ನಂತರ ರಾವಣ ಚಿತ್ರದ ಮೂಲಕ ಸಂಚಿತಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದೀಗ ಅವರು ತೆಲುಗು ಚಿತ್ರರಂಗದೆಡೆಗೆ ಮುಖ ಮಾಡಿದ್ದಾರೆ.
ಶ್ರೀನಿವಾಸ್ ಎಂಬುವವರ ನಿರ್ದೇಶನದಲ್ಲಿ ತಯಾರಾಗಲಿರುವ ಈ ಹೊಸ ತೆಲುಗು ಚಿತ್ರಕ್ಕೆ ಇನ್ನೂ ನಾಮಕರಣ ಮಾಡಿಲ್ಲವಂತೆ. ರಾಜ ಎಂಬ ನಾಯಕ ನಟನ ಜೊತೆ ಸಂಚಿತಾ ನಟಿಸಲಿದ್ದಾರಂತೆ.
ಯೋಗಿ ಜೊತೆ ರಾವಣದಲ್ಲಿ ನಟಿಸಿದ ಸಂಚಿತಾ ಅವರಿಗೆ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಆಫರ್‌ಗಳು ಬರಲಿಲ್ಲವಂತೆ. ಹಾಗಾಗಿ ತೆಲುಗು ಚಿತ್ರರಂಗದೆಡೆ ಸಂಚಿತಾ ಪಾದ ಬೆಳೆಸಿದ್ದಾರೆ ಎಂದು ಗಾಂಧಿನಗರದ ಮಂದಿ ಹೇಳುತ್ತಿದ್ದಾರೆ. ಆದರೆ ಕನ್ನಡದಲ್ಲಿ ಉತ್ತಮ ಅವಕಾಶಗಳು ಬಂದರೆ ಖಂಡಿತಾ ನಾನು ಕನ್ನಡಕ್ಕೇ ಎಂದು ಸಂಚಿತಾ ಕನ್ನಡ ಪ್ರೀತಿಯನ್ನು ಎದೆತಟ್ಟಿ ಹೇಳಿಕೊಳ್ಳುತ್ತಿದ್ದಾರೆ.