ರಾಕಿ, ಗುಲಾಮ, ಯೋಗಿ ಸೇರಿದಂತೆ ಹಲವು ಚಿತ್ರಗಳಲ್ಲಿ ಮಿಂಚಿದ್ದ ಬಿಯಾಂಕಾ ದೇಸಾಯಿ ವೀಕೆಂಡ್ ಹೆಸರಿನ ಹಿಂದಿ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅದೂ ಅರ್ಜುನ್ ಸರ್ಜಾ ಅವರೊಂದಿಗೆ. ಈ ಚಿತ್ರ ಹಿಂದಿಯಲ್ಲಿ ಅಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಬಿಡುಗಡೆಗೊಳ್ಳಲಿದೆ!
ವೀಕೆಂಡ್ ಚಿತ್ರದ ನಿರ್ದೇಶಕ, ನಿರ್ಮಾಪಕ ಟೀನೂ ವರ್ಮಾ. ಈ ಚಿತ್ರದಲ್ಲಿ ಬಿಯಾಂಕಳದ್ದು ವಿಶೇಷ ಪಾತ್ರವಂತೆ. ಚಿತ್ರದಲ್ಲಿ ಬಿಯಾಂಕಾ ಮದುವೆಯಾಗಿ ಆರು ವರ್ಷದ ಮಗುವೊಂದರ ತಾಯಿಯಾಗಿರುತ್ತಾರಂತೆ.
ಕನ್ನಡದಲ್ಲಿ ಬಿಯಾಂಕಳ ಕಾಫಿ ಶಾಪ್ ಚಿತ್ರ ಈಗಾಗಲೇ ತೆರೆಗೆ ಬರಲು ಸಿದ್ಧವಾಗಿದೆ. ಮತ್ತೊಂದು ಚಿತ್ರ ಸೆಂಚುರಿ ಬಿಡುಗಡೆಯಾಗಬೇಕಿದೆ. ಅಂದಹಾಗೆ ಮುಂಬೈ ಬೆಡಗಿಯಾದ ಬಿಯಾಂಕ ಬೆಂಗಳೂರಿನಲ್ಲಿ ಇದ್ದು ಸಂಪೂರ್ಣ ಕನ್ನಡ ಮಾತನಾಡಲು ಕಲಿತಿದ್ದಾರಂತೆ.