ಕನ್ನಡದಲ್ಲಿ ಅಂದು ಚಾಕಲೇಟ್ ಹೀರೋ ಎಂದೇ ಕರೆಯಲ್ಪಟ್ಟಿದ್ದ ನಟ ಸುನಿಲ್ ರಾವ್, ರತ್ನಜ ಅವರು ನಿರ್ದೇಶಿಸುತ್ತಿರುವ ಪ್ರೇಮಿಸಂ ಚಿತ್ರದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಮೂಲ್ಯ ನಾಯಕಿಯಾಗಿರುವ ಈ ಚಿತ್ರದಲ್ಲಿ ಸುನಿಲ್‌ದು ಎಂಥ ಪಾತ್ರ ಎಂಬುದೇ ಈಗ ಹಲವರಲ್ಲಿ ಕುತೂಹಲ ಕೆರಳಿಸಿದೆ.
ಈ ಹಿಂದೆ ಸುನಿಲ್, ಪೂಜಾ ಗಾಂಧಿ ಅವರೊಂದಿಗೆ ಮಿನುಗು ಚಿತ್ರದಲ್ಲಿ ಅಭಿನಯಿಸಿದ್ದರು. ಅದೇಕೋ ಆ ಚಿತ್ರ ಹೆಚ್ಚು ದಿನ ಚಿತ್ರಮಂದಿರದಲ್ಲಿ ಇರಲು ಬಯಸಲಿಲ್ಲ. ಚಿತ್ರ ಹಿಟ್ ಆಗಬಹುದೆಂಬ ಸುನಿಲ್ ಅವರ ನಿರೀಕ್ಷೆ ಸುಳ್ಳಾಗಿತ್ತು. ಇದೀಗ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಹೀರೋ ಇಮೇಜನ್ನು ಪಕ್ಕಕ್ಕಿಟ್ಟಿದ್ದಾರೆ.
MOKSHA
ಆದರೆ ಸುನಿಲ್ ಅವರ ಪ್ರಕಾರ, ಪ್ರೇಮಿಸಂ ಚಿತ್ರ ಮಿನುಗು ಚಿತ್ರದ ಜೊತೆಜೊತೆಗೇ ನಟಿಸಿದ ಚಿತ್ರ. ಇದು ಮಿನುಗು ನಂತರ ಬಂದ ಆಫರ್ ಅಲ್ಲ.
ನಟಿ ಅಮೂಲ್ಯ ಪ್ರೇಮಿಸಂ ಚಿತ್ರದ ನಾಯಕಿ. ವರುಣ್, ಚೇತನ್ ಚಂದ್ರ ಈ ಚಿತ್ರದ ನಾಯಕ ನಟರುಗಳು. ಪ್ರೇಮಿಸಂ ಚಿತ್ರ ನೈಜ ಘಟನೆಯ ಸುತ್ತ ಹೆಣೆಯಲಾದ ಕಥೆ ಎಂದು ಹೇಳಲಾಗುತ್ತಿದೆ. ಸುನಿಲ್ ಅವರದ್ದು ಅತಿಥ್ ಪಾತ್ರವಾದರೂ ಪಾತ್ರ ಬಹಳ ಮುಖ್ಯವಾದುದು ಎಂಬ ಮಾತುಗಳೂ ಕೇಳಿ ಬರುತ್ತಿದೆ. ಆದರೆ ರತ್ನಜ ಮಾತ್ರ ಈ ವಿಚಾರವನ್ನು ಗುಟ್ಟಾಗಿಟ್ಟಿದ್ದು, ಹೇಳಲು ಉತ್ತಮ ಸಮಯಕ್ಕಾಗಿ ಕಾಯುತ್ತಿದ್ದಾರೆ.