ಒಂದು ಚಿತ್ರಕ್ಕಾಗಿ ಎಂಥಾ ಸಾಹಸ ಮಾಡಲು ತಾವು ರೆಡಿ ಎನ್ನುವ ಜಾಯಮಾನ ನಟ ವಿಜಯ್ ಅವರದ್ದು. ಈ ಹಿಂದೆ ಶಂಕರ್ ಐಪಿಎಸ್ ಚಿತ್ರಕ್ಕಾಗಿ ಎಡೆಬಿಡದೆ ಕಸರತ್ತುಗಳನ್ನು ಮಾಡಿ ತಮ್ಮ ದೇಹವನ್ನು ಬಲಿಷ್ಟಗೊಳಿಸಿದ್ದರು.
ಇದೀಗ ವಿಜಿ, ಕರಿ ಚಿರತೆ ಚಿತ್ರದ ಹಾಡೊಂದಕ್ಕೆ 10 ವಿವಿಧ ವೇಷ ಧರಿಸಿ ಕಣಿಯಲು ಸಜ್ಜಾಗಿದ್ದಾರೆ ಈ ದುನಿಯಾ ಖ್ಯಾತಿಯ ವಿಜಯ್. ಹೌದೇನ್ರೀ ವಿಜಿ, ವಿಷಯ ನಿಜಾನಾ? ಎಂದು ಕೇಳಿದರೆ 'ಏನಿದೆ ಸಾರ್ ನಮ್ಮದು ರಾಮ, ಕೃಷ್ಣನ ವೇಷ' ಎಂದಷ್ಟೇ ಹೇಳುತ್ತಾರೆ.
ಹೊಸತನ್ನು ಪ್ರೇಕ್ಷಕರಿಗೆ ತೋರಿಸಿದರೆ ಅವರು ಇಷ್ಟಪಡುತ್ತಾರೆ. ಜೊತೆಗೆ ಹಾಡನ್ನು ನೋಡಿ ನಕ್ಕುನಲಿಯುತ್ತಾರೆ ಎಂದು ನೃತ್ಯ ನಿರ್ದೇಶಕ ಹರ್ಷ ಹೇಳಿಕೊಳ್ಳುತ್ತಾರೆ. ಅಂದ ಹಾಗೆ ನಟಿ ಶರ್ಮಿಳಾ ಸೀತೆ ಪಾತ್ರದಲ್ಲಿ ಹಾಗೂ ಯಜ್ಞಾ ಶೆಟ್ಟಿ ರುಕ್ಮಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.