ಕನ್ನಡದ ಹಿರಿಯ ಚಿತ್ರ ನಿರ್ದೇಶಕ ಎಂ.ವಿ.ಕೃಷ್ಣಸ್ವಾಮಿ ಅವರು ಪ್ರತಿಷ್ಠಿತ ವಿ.ಶಾಂತರಾಂ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಲನಚಿತ್ರ ರಂಗಕ್ಕೆ ಸಲ್ಲಿಸಿದ ಸೇವೆ ಮತ್ತು ಜೀವಿತಾವಧಿ ಸಾಧನೆ ಪರಿಗಣಿಸಿ ಕೃಷ್ಣಸ್ವಾಮಿ ಅವರನ್ನು ಶಾಂತರಾಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಫೆಬ್ರವರಿ 9 ರಂದು ಮುಂಬಯಿಯಲ್ಲಿ ನಡೆಯುವ ಸಾಕ್ಷ್ಯ ಚಿತ್ರೋತ್ಸವ ಸಮಾರಂಭದಲ್ಲಿ ಕೃಷ್ಣಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಕೃಷ್ಣಸ್ವಾಮಿ ಅವರು ಬಹು ಜನಪ್ರಿಯ ಪಾಪ ಪುಣ್ಯ ಮತ್ತು ಸುಬ್ಬಾಶಾಸ್ತ್ತ್ರಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು.