ನಟ ರಮೇಶ್ ಅರವಿಂದ್ ಸಿಕ್ಕಾಪಟ್ಟೆ ಜಾಣ ಪ್ರತಿಭೆ. ಅವರು ಏನೇ ಮಾಡಿದರೂ ಅದನ್ನು ಚೊಕ್ಕವಾಗಿ ಮಾಡಬಲ್ಲರು. ಕ್ರೇಜಿ ಕುಟುಂಬ ಚಿತ್ರದ ಬಗ್ಗೆ ಕೂಡ ಅದೇ ಮಾತುಗಳು ಕೇಳಿಬರುತ್ತಿದೆ.
ಅಂದಹಾಗೆ ಸೆನ್ಸಾರ್ ಮಂಡಳಿಯವರು ಕ್ರೇಜಿ ಕುಟುಂಬ ನೋಡಿ ಮೆಚ್ಚಿದ್ದಾರಂತೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಕ್ರೇಜಿ ಕುಟುಂಬವನ್ನು ಕುಟುಂಬ ಸಮೇತರಾಗಿ ನೋಡಬಹುದು ಎನ್ನುವ ಅಭಿಪ್ರಾಯವಂತೂ ಇದೆ.
ಅನಂತನಾಗ್, ರಮೇಶ್ ಪಾತ್ರವೇ ಈ ಚಿತ್ರದ ಹೈಲೈಟ್ ಅಂತೆ. ಕವಿಗಳು ಬರೆದ ಗೀತೆಗಳೇ ಈ ಚಿತ್ರದ ಜೀವಾಳವಂತೆ. ಅದಕ್ಕೆ ಹೇಳಿದ್ದು ರಮೇಶ್ ಅವರ ಪ್ರತಿಭೆ ಅಸಾಮಾನ್ಯ ಅಂತ.