ಸದ್ಯಕ್ಕೆ ನಟ ಯೋಗೀಶ್ ಅವರ ಸಿನಿಮಾಗಳು ಒಂದರ ಹಿಂದೆ ಒಂದು ಫ್ಲಾಪ್ ಆಗುತ್ತಿರುವುದು ಅವರ ಅಭಿಮಾನಿಗಳನ್ನು ಚಿಂತೆಗೀಡುಮಾಡಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹಬ್ಬಿದೆ.
ಯೊಗಿಯ ಪ್ರೀತ್ಸೇ ಪ್ರೀತ್ಸೇ ಚಿತ್ರವನ್ನು ಜನರು ಪ್ರೀತಿಸಲಿಲ್ಲ. ಯೋಗಿ ಚಿತ್ರವನ್ನು ಜನರು ಯೋಗ ಕರುಣಿಸಲಿಲ್ಲ. ರಾವಣ ಚಿತ್ರವನ್ನು ಪ್ರೇಕ್ಷಕರು ಹಾಗೇ ಸಂಹಾರ ಮಾಡಿಬಿಟ್ಟರು. ಈ ಎಲ್ಲ ಕಾರಣಗಳಿಗಾಗಿಯೇ ಯೋಗಿಯ ಉತ್ತಮ ಚಿತ್ರಕ್ಕಾಗಿ ಜನ ಕಾಯುತ್ತಿದ್ದಾರೆ.
ಸದ್ಯಕ್ಕೆ ಅವರ ಅಭಿನಯದ ಪುಂಡ, ಯಕ್ಷ, ಧೂಳ್ ಬಿಡುಗಡೆಯಾಗಬೇಕಿದೆ. ಸತತ ಸೋಲುಗಳಿಂದ ಲೂಸ್ ಆಗದೇ ಯೋಗಿ ಕನ್ನಡದಲ್ಲಿ ನೆಲೆ ನಿಂತು ಕೊಳ್ಳುತ್ತಾನೆ ಎನ್ನುತ್ತಿದೆ ಗಾಂಧಿನಗರದ ದುನಿಯಾ.