ಕಿಚ್ಚ ಖ್ಯಾತಿಯ ಸುದೀಪ್ ರಣ್ ಚಿತ್ರದಲ್ಲಿ ತನ್ನ ಅದ್ಭುತ ನಟನೆಯ ಮೂಲಕ ಮನಸೂರೆಗೊಂಡಿರುವ ಜೊತೆಗೇ ಸದ್ಯದಲ್ಲೇ ತನ್ನದೇ ನಿರ್ದೇಶನ ಹಾಗೂ ನಟನೆಯ ಜಸ್ಟ್ ಮಾತ್ ಮಾತಲ್ಲಿ ಚಿತ್ರವೂ ಹೊರಬರಲಿದೆ. ಈ ಖುಷಿಯಲ್ಲಿ ಸುದೀಪ್ ಮಾತನಾಡಹೊರಟರೆ ಜಸ್ಟ್ ಮಾತ್ ಮಾತಲ್ಲೇ ಮಾತಿನ ಹೊಳೆ ಹರಿಸುತ್ತಾರೆ.
ಅಂದಹಾಗೆ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ನಿರ್ಮಾಣವನ್ನು ಸುದೀಪ್ ಮನಾಡಬಯಸಿದ್ದರಂತೆ. ಆದರೆ ಆ ಚಿತ್ರವ್ನನು ಶಂಕರ್ ಗೌಡ ನಿರ್ಮಾಣ ಮಾಡಬಯಸಿದ್ದರಿಂದ ಸುದೀಪ್ ನಿರ್ದೇಶನ ಹಾಗೂ ನಟನೆಯ ಜವಾಬ್ದಾರಿಯನ್ನು ಹೊತ್ತರಂತೆ.
ಈ ಚಿತ್ರ ವೀರ ಮದಕರಿಯಂತೆ ಆಕ್ಷನ್ ಚಿತ್ರವಲ್ಲ. ಈ ಬಗ್ಗೆ ಮಾತನಾಡುವ ಸುದೀಪ್, ನಾನು ನಿರ್ದೇಶನದ ಕ್ಷೇತ್ರದಲ್ಲಿ ನನ್ನದೊಂದು ಹೊಸ ಪ್ರಭುತ್ವ ಸಾಧಿಸಲು ಬಯಸಿದ್ದೆ. ಹಾಗಾಗಿ ನನ್ನ ನಿರ್ದೇಶನದ ಶೈಲಿಯನ್ನು ಈ ಚಿತ್ರಕ್ಕಾಗಿ ಬದಲಿಸಿದೆ. ಈ ಚಿತ್ರದ ಪ್ರಸ್ತುತಪಡಿಸುವ ರೀತಿಯೂ ವಿಭಿನ್ನವಾಗಿ ಮಾಡಿದ್ದೇನೆ. ಬೇಸಿಕಲೀ, ನಾನೊಬ್ಬ ಕ್ಲೋಸಪ್ ಡೈರೆಕ್ಟರ್ ಆಗಲು ಬಯಸುತ್ತೇನೆ ಎನ್ನುತ್ತಾರೆ ಸುದೀಪ್.
MOKSHA
ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮಾತು ತುಂಬ ಕಡಿಮೆ. ಆದರೆ ಉಳಿದ ಪಾತ್ರಗಳೆಲ್ಲಾ ಸಿಕ್ಕಾಪಟ್ಟೆ ಮಾತಾಡುತ್ತವೆ. ನನ್ನ ಪಾತ್ರ ಮೌನದಲ್ಲೇ ಅಭಿನಯ ತೋರಿಸುವಂಥದ್ದು ಎಂದು ತನ್ನ ಪಾತ್ರದ ಬಗ್ಗೆ ವಿವರಿಸುತ್ತಾರೆ ಸುದೀಪ್.
ರಮ್ಯಾ ಜೊತೆ ಜಸ್ಟ್ ಮಾತ್ ಮಾತಲ್ಲಿ ಚಿತ್ರೀಕರಣ ಸಂದರ್ಭ ಗಲಾಟೆಯಾದ್ರೂ, ಸುದೀಪ್ ಮಾತ್ರ ರಮ್ಯಾರೊಂದಿಗಿನ ನನ್ನ ತರೆಯ ಮೇಲಿನ ಜೋಡಿ ಚೆನ್ನಾಗಿ ಕಾಣುತ್ತದೆ ಎನ್ನುತ್ತಾರೆ. ನನ್ನ ಹಾಗೂ ರಮ್ಯಾರ ಜೋಡಿ ತೆರೆಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ. ರಮ್ಯಾ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಪಕ್ಕದ ಮನೆಯ ಹುಡುಗಿಯಂಥ ಲವಲವಿಕೆಯ ಸಾದಾಸೀದಾ ಹುಡುಗಿಯಂತೆ ಆಕೆ ಕಂಗೊಳಿಸಿದ್ದಾಳೆ. ಅಷ್ಟೇ ಅಲ್ಲ, ಹೊಸ ವಿನ್ಯಾಸದ ಉಡುಗೆ ತೊಟ್ಟು ಚಿತ್ರದುದ್ದಕ್ಕೂ ಲಕ್ಷಣವಾಗಿ, ಸುಂದರವಾಗಿ ಕಾಣುತ್ತಾರೆ ಎಂದು ವಿವರಿಸಿದರು ಸುದೀಪ್.
ಆದರೆ ರಮ್ಯಾ ಯಾಕೆ ಚಿತ್ರದ ಪ್ರಚಾರದಲ್ಲೆಲ್ಲೂ ಕಾಣಿಸುತ್ತಿಲ್ಲ? ಅವರನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆಯೇ? ರಮ್ಯಾ ಹಾಗೂ ಸುದೀಪ್ ನಡುವಿನ ಕೋಪ ತಣಿದಿಲ್ಲವೇ ಎಂದರೆ ಚಿತ್ರತಂಡ ಮೌನ ಧರಿಸುತ್ತದೆ. ಏನೋಪ್ಪಾ ಯಾರಿಗ್ಗೊತ್ತು!!!