ವಿಜಯ ರಾಘವೇಂದ್ರ ಅವರನ್ನು ಹಾಕಿಕೊಂಡು ಟಿ.ಎಸ್.ನಾಗಾಭರಣ ಕಲ್ಲರಳಿ ಹೂವಾಗಿ ಎಂಬ ಐತಿಹಾಸಿಕ ಹಿನ್ನೆಲೆಯ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ ತಕ್ಕ ಮಟ್ಟಿಗೆ ದುಡ್ಡು ಮಾಡಿತ್ತು. ಆ ನಂತರ ನಾಗಾಭರಣ ನಂಯಜಮಾನ್ರು ಎಂಬ ಕಮರ್ಷಿಯಲ್ ಚಿತ್ರವನ್ನು ನಿರ್ದೇಶಿಸಿದರು. ಅದೇಕೋ ಆ ಚಿತ್ರ ಮಾತ್ರ ಮೇಲೇಳಲೇ ಇಲ್ಲ.
ಇದೀಗ ನಾಗಭರಣ ಮತ್ತೊಮ್ಮೆ ಐತಿಹಾಸಿಕ ಹಿನ್ನೆಲೆಯ ಚಿತ್ರವನ್ನು ನಿರ್ದೇಶಿಸಿಸುವ ಕನಸು ಕಾನುತ್ತಿದ್ದಾರಂತೆ. ಈಗ ಅವರು ಶಿವಪ್ಪ ನಾಯಕ ಹೆಸರಿನ ಚಿತ್ರದ ನಿರ್ದೇಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ಈ ಚಿತ್ರಕ್ಕೂ ವಿಜಯ್ ರಾಘವೇಂದ್ರ ಅವರನ್ನೇ ನಾಗಾಭರಣ ಆಯ್ಕೆ ಮಾಡಿಕೊಳ್ಳಲ್ಲಿದ್ದಾರಂತೆ. ಅಂತೂ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮತ್ತೊಂದು ಚಿತ್ರ ನೋಡುವ ಭಾಗ್ಯ ಕನ್ನಡದ ಪ್ರೇಕ್ಷಕನಿಗೆ ಸಿಕ್ಕಂತಾಗಿದೆ.