ಡೆಡ್ಲಿ ಸೋಮ- ಭಾಗ 2ರ ಶೂಟಿಂಗ್ ಸಂದರ್ಭ ನಟ ಆದಿತ್ಯ 25 ಅಡಿ ಎತ್ತರದಿಂದ ಕೆಳಗುರುಳಿ ತೀವ್ರ ಗಾಯಗಳಾಗಿವೆ. ಮಂಗಳವಾರ ಈ ಘಟನೆ ನಡೆದಿದ್ದು, ಆದಿತ್ಯ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನದಲ್ಲಿ ದೇವನಹಳ್ಳಿ ಸಮೀಪ ಡೆಡ್ಲಿ ಸೋಮ- 2 ಚಿತ್ರದ ಚಿತ್ರೀಕರಣ ಮಾಡಲಾಗುತ್ತಿತ್ತು. ಚಿತ್ರೀಕರಣದ ದೃಶ್ಯವೊಂದರಲ್ಲಿ ನಟ ಆದಿತ್ಯ 25 ಅಡಿ ಎತ್ತರದಿಂದ ಜಿಗಿಯಬೇಕಿತ್ತು. ಹಗ್ಗ ಕಟ್ಟಿಕೊಂಡೇ ಆದಿತ್ಯ ಮೇಲಿಂದ ಕೆಳಕ್ಕೆ ಜಿಗಿದಿದ್ದಾರೆ. ಆದರೆ, ಅವರ ಅದೃಷ್ಟ ಉಲ್ಟಾ ಹೊಡೆದಿತ್ತು. ಆಯ ತಪ್ಪಿ ಬಿದ್ದು ಬಿಟ್ಟಿದ್ದಾರೆ. ಪರಿಣಾಮ, ಬೆನ್ನು ಹಾಗೂ ಸೊಂಟದ ಮೂಳೆಗೆ ತೀವ್ರ ಪೆಟ್ಟಾಗಿದೆ.
ಕೆಳಕ್ಕೆ ಬಿದ್ದಾಗ ಆದಿತ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಿದ್ದರಂತೆ. ಎಂಆರ್ಐ ಸ್ಕ್ಯಾನಿಂಗ್ ಕೂಡ ಮಾಡಿಸಲಾಗಿದ್ದುದೆ. ವೈದ್ಯರು ಆದಿತ್ಯ ಅವರಿಗೆ ಪೆಟ್ಟಾಗಿದ್ದರೂ, ಗಾಬರಿ ಪಡುವ ಅಗತ್ಯವಿಲ್ಲ. 15 ದಿನಗಳ ವಿಶ್ರಾಂತಿ ತೆಗೆದುಕೊಳ್ಳಲು ತಿಳಿಸಿದ್ದಾರೆ ಎಂದು ಆದಿತ್ಯ ಅವರ ಕುಟುಂಬ ಹೇಳಿದೆ.