ಮಗಳು ನಟನೆಗೆ: ಅಪ್ಪ ರಾಜೇಂದ್ರ ಸಿಂಗ್ ಬಾಬುಗೆ ಗೊತ್ತಿಲ್ಲ!
MOKSHA
ಕೋಟಿ ರಾಮು ನಿರ್ಮಾಣದ ಕಂಠೀರವ ಚಿತ್ರಕ್ಕೆ ನಾಯಕಿಯ ಆಯ್ಕೆ ಕುರಿತು ಗಾಂಧಿನಗರದಲ್ಲಿ ಕೆಲ ದಿನಗಳಿಂದ ಚರ್ಚೆಗಳು ನಡೆಯುತ್ತಿವೆ. ಇದೀಗ ಈ ಚರ್ಚೆಗೆ ನಿಖರವಾದ ಉತ್ತರ ಸಿಗದಿದ್ದರೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುರವರ ಪುತ್ರಿ ರೋಹಿಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಈಗಾಗಲೇ ನಿರ್ದೇಶಕ ತುಷಾರ್ ರಂಗನಾಥ್ ಅವರು ರೋಹಿಣಿ ಜೊತೆ ಮಾತುಕತೆ ಮಾಡಿದ್ದರಂತೆ. ಆದರೆ ಈ ಬಗ್ಗೆ ರಾಜೇಂದ್ರಸಿಂಗ್ ಬಾಬು ಅವರಿಗೆ ತಿಳಿದಿಲ್ಲವಂತೆ. ನನ್ ಮಗಳು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವುದು ನನಗೆ ಗೊತ್ತಿಲ್ಲವಲ್ಲ ಎಂದು ಪ್ರತಿಕ್ರಿಯಿಸುತ್ತಾರೆ.
ಅಷ್ಟೇ ಅಲ್ಲ. ಸದ್ಯಕ್ಕೆ ಏನೂ ಇಲ್ಲ. ಇನ್ನೆರಡು ದಿನಗಳಲ್ಲಿ ಇದು ಅಂತಿಮವಾಗಲಿದೆ ಎನ್ನುತ್ತಾರೆ. ಯಾವುದಕ್ಕೂ ಇನ್ನೆರಡು ಕಾಯಲೇಬೇಕು.