ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಗ್ಗರ ಹಿಡಿದ ತುಳುನಾಡ ಶಿವಧ್ವಜ್‌ಗೆ ನೂರು ಕನಸು! (Gaggara | Shivadhaj | Swarna Kamala)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ತುಳು ಸಂಸ್ಕ್ಕತಿಯನ್ನು ಬಿಂಬಿಸುವ ಗಗ್ಗರ ಚಿತ್ರಕ್ಕೆ ರಾಷ್ಟ್ತ್ರಪ್ರಶಸ್ತಿ ಬಂದಿರುವುದು ತಿಳಿದೇ ಇದೆ. ಇದರಿಂದ ನಟ ಕಮ್ ನಿರ್ದೇಶಕರಾಗಿರುವ ಶಿವಧ್ವಜ್ ಫುಲ್ ಖುಷಿಯಲ್ಲಿದ್ದಾರೆ. ಇದಕ್ಕೆ ಹತ್ತು ವರ್ಷಗಳ ಕನಸಿಗೆ ಸಿಕ್ಕ ಪ್ರತಿಫಲ ಎನ್ನುತ್ತಾರೆ ಅವರು.

ಚಿಕ್ಕವನಿದ್ದಾಗ ಇಂತಹ ಅನೇಕ ದೃಶ್ಯಗಳನ್ನು ನೋಡಿದ್ದೆ. ಮೊದಲಿನಿಂದಲೂ ಇಂತಹ ಚಿತ್ರ ಮಾಡಬೇಕೆಂಬ ಹಂಬಲ, ತುಡಿತ ನನ್ನಲ್ಲಿತ್ತು. ಅದಕ್ಕೆ ತಂಡದಿಂದ ಸಕಾರಾತ್ಮಕ ಸಹಕಾರವೂ ಸಿಕ್ಕಿರುವುದೇ ಚಿತ್ರದ ಯಶಸ್ಸಿಗೆ ಕಾರಣವಾಯಿತು ಎನ್ನುತ್ತಾರೆ ಶಿವಧ್ವಜ್.

ಚಿತ್ರದ ಇನ್ನೊಂದು ವಿಶೇಷತೆ ಎಂದರೆ ಚಿತ್ರವನ್ನು ಕೇವಲ 13 ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ 13 ಲಕ್ಷ ಖರ್ಚಾಗಿದೆಯಂತೆ. ಚಿತ್ರದಲ್ಲಿ ಮುಖ್ಯವಾಗಿ ಭೂತಕೋಲ ಆಚರಣೆಯ ಬಗ್ಗೆ ಹಲವು ಸೂಕ್ಷ್ಮತೆಗಳನ್ನು ಬಿಂಬಿಸಲಾಗಿದೆ ಎಂದು ವಿವರಿಸುತ್ತಾರೆ ಅವರು. ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಶಿವಧ್ವಜ್ ಅವರಿಗೀಗ ಜವಾಬ್ದಾರಿ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನೊಂದು ಸಾಹಸಕ್ಕೆ ಕೈ ಹಾಕುವ ಯೋಜನೆಯಲ್ಲಿದ್ದಾರೆ ಅವರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಗ್ಗರ, ಶಿವಧ್ವಜ್, ಸ್ವರ್ಣಕಮಲ