ಯೋಗರಾಜ ಭಟ್ಟರ ಮುಂಬರುವ ಪಂಚರಂಗಿ ಚಿತ್ರದಲ್ಲಿ ಸೋನು ನಟಿಸುತ್ತಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಗಾಂಧಿನಗರದಲ್ಲಿ ಕೇಳಿ ಬಂದಿತ್ತು. ಆದರೆ ಇತ್ತೀಚೆಗೆ ಬಂದಿರುವ ಮಾಹಿತಿ ಪ್ರಕಾರ, ಸೋನು ಪಂಚರಂಗಿಯಲ್ಲಿ ನಟಿಸುತ್ತಿಲ್ಲವಂತೆ.
ಯಾಕೆ ಎಂದು ಆಕೆಯನ್ನು ಪ್ರಶ್ನಿಸಿದರೆ, ನಂಗೆ ಏನೂ ಗೊತ್ತಿಲ್ಲ. ಭಟ್ಟರ ಸಿನಿಮದಲ್ಲಿ ಕೆಲಸ ಮಾಡುವುದಕ್ಕೆ ನನಗೆ ಇಷ್ಟ ಇತ್ತು. ಅವರೇ ಈ ಚಿತ್ರದಲ್ಲಿ ನಟಿಸಿ ಎಂದಿದ್ದರು. ಆದರೆ ಈಗ ಏನಾಗಿದೋ ಗೊತ್ತಿಲ್ಲ. ಇದುವರೆಗೆ ಯಾವ ಕರೆಯೂ ನನಗೆ ಬಂದಿಲ್ಲ ಎಂದು ಪ್ರತಿಕ್ರಿಯಿಸುತ್ತಾರೆ.
ಇಷ್ಟಕ್ಕೂ ಚಿತ್ರದಲ್ಲಿ ತನ್ನನ್ನು ಆಯ್ಕೆ ಮಾಡಲಾಗಿದೆಯೇ ಎಂದು ಕೂಡ ತಿಳಿದಿಲ್ಲವಂತೆ. ಅತ್ತ ಭಟ್ಟರ ಕಡೆಯಿಂದಲೂ ಏನೂ ಮಾಹಿತಿಯಲ್ಲ. ಸದ್ಯಕ್ಕೆ ತಮಿಳು ಚಿತ್ರದಲ್ಲಿ ನಟಿಸುತ್ತಿರುವ ಸೋನು ಹೊಸ ಆಫರ್‌ಗಳಿಗಾಗಿ ಕಾಯುತ್ತಿದ್ದಾರೆ. ಅಂತೂ ಪಂಚರಂಗಿಯಾಗಿ ಯಾರು ಬರುತ್ತಾರೆ ಕಾದು ನೋಡಬೇಕು.