ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬರಲಿದೆ ಪುನೀತ್‌ರ 'ರಾಮ್' ಮುಂದುವರಿದ ಭಾಗ! (Ram | Rama Rama | Puneeth)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕೆಲವು ಚಿತ್ರಗಳು ಸೂಪರ್ ಹಿಟ್ ಎನಿಸಿಕೊಂಡರೆ ಅದರ ಹಿಂದೆಯೇ ಸಾಕಷ್ಟು ಹೊಸ ಹೊಸ ಚಿಂತನೆಗಳು ಹುಟ್ಟಿಕೊಳ್ಳುತ್ತವೆ. ಅದೇ ರೀತಿಯ ಚಿತ್ರಗಳು ಮತ್ತೆ ಮತ್ತೆ ಹುಟ್ಟಿಕೊಳ್ಳಬಹುದು ಅಥವಾ ಚಿತ್ರದ ನಾಯಕ, ನಾಯಕಿಯರಿಗೆ ಸಾಕಷ್ಟು ಆಫರ್‌ಗಳು ಬರಬಹುದು. ಇಷ್ಟೇ ಏಕೆ, ಚಿತ್ರದ ಮುಂದುವರಿದ ಭಾಗವು ಸಿದ್ಧಗೊಳ್ಳಬಹುದು.

ಪುನೀತ್ ರಾಜಕುಮಾರ್ ಅಭಿನಯದ ಹಿಟ್ ಚಿತ್ರ ರಾಮ್ ಚಿತ್ರಕ್ಕೂ ಇದೇ ಸರದಿ ಬಂದಿದೆ ಎಂದು ಮಾತಾಡಿಕೊಳ್ಳಲಾಗುತ್ತಿದೆ. ಈ ಚಿತ್ರ ತೆಲುಗಿನ ರೆಡಿ ಚಿತ್ರದ ರಿಮೇಕ್. ಕನ್ನಡದಲ್ಲಿ ಇದನ್ನು ಕೆ. ಮಾದೇಶ ನಿರ್ದೇಶಿಸಿದ್ದರು. ಇದೀಗ ರಾಮ್ ಚಿತ್ರದ ಗೆಲುವು ಅದರ ಮುಂದುವರಿದ ಭಾಗದವರೆಗೆ ಬಂದಿದೆ.

ಆದರೆ ಚಿತ್ರವನ್ನು ಯಾವಾಗ ಯಾರ ನಿರ್ಮಾಣದಲ್ಲಿ ಎಂಬುದು ಇನ್ನು ನಿಕ್ಕಿಯಾಗಿಲ್ಲ. ಅಷ್ಟೇ ಅಲ್ಲ. ರಾಮ್ ಚಿತ್ರ ತೆಲುಗಿನ ರಿಮೇಕ್ ಆಗಿರುವುದರಿಂದ ಅಲ್ಲಿ ಭಾಗ ಎರಡು ಬಂದಿಲ್ಲವಾದರೂ ಕನ್ನಡದಲ್ಲಿ ಅದರ ಮುಂದುವರಿದ ಭಾಗವನ್ನು ಯಾರೂ ಹೇಗೆ ಮಾಡುತ್ತಾರೋ ಗೊತ್ತಿಲ್ಲ. ಆದರೂ ತೆಲುಗಿನ ಮತ್ತೊಂದು ಚಿತ್ರವನ್ನು ರಿಮೇಕಿಸಿ ಅದಕ್ಕೆ ರಾಮ ರಾಮ ಎಂಬ ಹೆಸರಿಡುವ ಬಗ್ಗೆಯೂ ಸುದ್ದಿ ಕೇಳಿ ಬರುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಮ್, ರಾಮ ರಾಮ, ಪುನೀತ್, ಕನ್ನಡ ಸಿನಿಮಾ