ಕಾಲೇಜಿನಲ್ಲಿರಬೇಕಾದರೆ ಹ್ಯಾಂಡ್ಸಮ್ ಹುಡುಗನ ಮೇಲೆ ಪ್ರೀತಿ ಹುಟ್ಟಿತಂತೆ. ಆದರೆ ಆತ ಮಾತ್ರ ಒಂದು ದಿನನೂ ಈಕೆಯ ಕಡೆಗೆ ತಿರುಗಿಯೂ ನೋಡಲಿಲ್ವಂತೆ. ಯಾಕೆಂದರೆ ಈಕೆ ಅಷ್ಟು ಡುಮ್ಮಿಯಾಗಿದ್ದಳಂತೆ!
ಯಾರಪ್ಪಾ ಅಂತಹ ಡುಮ್ಮಿ ಎಂದು ಆಶ್ಚರ್ಯಪಡಬೇಡಿ. ಬೇರಾರೂ ಅಲ್ಲ, ಈಗ ಸ್ಲಿಮ್ ಆಗಿರುವ ಬೋಲ್ಡ್ ಅಂಡ್ ಬ್ಯೂಟಿಫುಲ್ ಖ್ಯಾತಿಯ ಶರ್ಮಿಳಾ ಮಾಂಡ್ರೆ! ಆಶ್ಚರ್ಯವಾದ್ರೂ ಸತ್ಯ. ಈಕೆ ಚಿತ್ರರಂಗಕ್ಕೂ ಕಾಲಿಡುವುದಕ್ಕೂ ಮುನ್ನ ಸಿಕ್ಕಾಪಟ್ಟೆ ಡುಮ್ಮಿಯಾಗಿದ್ದಳಂತೆ. ನಂತರ ಖ್ಯಾತ ಚಿತ್ರ ವಿತರಕರಾದ ತಾತನ ಹಾದಿಯನ್ನು ಹಿಡಿದ ಶರ್ಮಿಳಾ ಸಜನಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಪ್ರಾರಂಭದಲ್ಲಿ ಕನ್ನಡ ನೆಟ್ಟಗೆ ಬರಲ್ಲ ಎಂದು ಹೀಯಾಳಿಸಿದವರೇ ಜಾಸ್ತಿಯಂತೆ. ಆದರೆ ಅದಕ್ಕೆಲ್ಲಾ ಶರ್ಮಿಳಾ ತಲೆಕೆಡಿಸಿಕೊಳ್ಳಲಿಲ್ಲವಂತೆ. ಏಕೆಂದರೆ ಪಿಯುಸಿಯಲ್ಲಿದ್ದಾಗಲೇ ಕನ್ನಡ ವಿಷಯದಲ್ಲಿ ಅಧಿಕ ಅಂಕ ಗಳಿಸಿದ್ದು ತಾನೆಂಬ ಹೆಮ್ಮೆ ಶರ್ಮಿಳಾಗಿದೆ. ಸದ್ಯಕ್ಕೆ ಬಿಡುಗಡೆಗೆ ಕಾದಿರುವ ಕರಿಚಿರತೆಯ ಕುರಿತು ಹೆಚ್ಚಿನ ನಿರೀಕ್ಷೆಯಲ್ಲಿರುವ ಶರ್ಮಿಳಾ, ದಿಗಂತ್, ಶ್ರೀನಗರ ಅವರೊಂದಿಗೆ ಸ್ವಯಂವರ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ಅಂದ ಹಾಗೆ ಇಂದಿನ ಫ್ಯಾಶನ್ ಯುಗದಲ್ಲೂ ಶರ್ಮಿಳಾ ಇಂದಿಗೂ ಮನೆಯಲ್ಲೇ ಕೆಲವು ಸೌಂದರ್ಯ ಹೆಚ್ಚಿಸುವ ಉಪಾಯಗಳನ್ನು ಮಾಡುತ್ತಾರೆ. ತನ್ನ ಅಜ್ಜಿ ಕೊಟ್ಟ ಗಂಧದ ಕೊರಡನ್ನೇ ಈಗಲೂ ತೇಯ್ದು ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಳ್ತರಂತೆ. ಇದೇ ಆಕೆಯ ಬ್ಯೂಟಿ ರಹಸ್ಯವಂತೆ!