ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಘು ದೀಕ್ಷಿತ್ ಹಾಡಿಗೆ ಸುದೀಪ್ ಜಸ್ಟ್ ರಚ್ಚೆ ಹಿಡಿದಿದ್ದರು!
(Raghu Dixit | Kannada Cinema | Film Song | Music Director | Just Mat Matalli)
ರಘು ದೀಕ್ಷಿತ್ ಹಾಡಿಗೆ ಸುದೀಪ್ ಜಸ್ಟ್ ರಚ್ಚೆ ಹಿಡಿದಿದ್ದರು!
MOKSHA
'ಸೈಕೋ' ಚಿತ್ರಕ್ಕೆ ಭರ್ಜರಿ ಸಂಗೀತ ಬಾರಿಸಿ ರಾತೋರಾತ್ರಿ ಮಹಾನ್ ಕನ್ನಡದ ಸಂಗೀತ ನಿರ್ದೇಶಕರೆನಿಸಿಕೊಂಡ ರಘು ದೀಕ್ಷಿತ್, 'ಜಸ್ಟ್ ಮಾತ್ ಮಾತಲ್ಲಿ' ಚಿತ್ರಕ್ಕೂ ಸೊಗಸಾದ ಸಂಗೀತ ನೀಡಿ ಹೊಸ ಅಲೆ ಎಬ್ಬಿಸಿದ್ದಾರೆ.
ಮೊನ್ನೆ ತನಕ ಹೆಚ್ಚು ಕಮ್ಮಿ ಮರೆತೇ ಹೋಗಿದ್ದ ರಘು, 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ. ಅಲ್ಲದೆ ರಘು ಈ ಚಿತ್ರದ ಮೂಲಕ ಮತ್ತಿಬ್ಬರು ಯುವ ಸಂಗೀತ ಸಂಯೋಜಕರನ್ನೂ ಪರಿಚಯಿಸಿದ್ದಾರೆ.
ಅಂದ ಹಾಗೆ ಈ ಚಿತ್ರದಲ್ಲಿ ರಘು ಸ್ವತಃ ಐದು ಹಾಡುಗಳನ್ನು ಹಾಡಿದ್ದಾರೆ. ಹಾಡುಗಳು ರಘು ಧ್ವನಿಯಲ್ಲೇ ಇರಲಿ ಎಂದು ಸುದೀಪ್ ರಚ್ಚೆ ಹಿಡಿದ ಪರಿಣಾಮ ಅವರು ಚಿತ್ರದ ಐದು ಹಾಡುಗಳನ್ನು ಹಾಡಲೇಬೇಕಾಯಿತಂತೆ.
'ಜಸ್ಟ್ ಮಾತ್ ಮಾತಲ್ಲಿ' ಚಿತ್ರ ಈಗಾಗಲೇ ಭರ್ಜರಿ ಆರಂಭ ಕಂಡಿದ್ದು, ಅವರ ಸಂಗೀತಕ್ಕೂ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಅವರಿಗೂ ಅಭಿಮಾನದ ಸಂಗತಿ.