ಶಿಶಿರ ಚಿತ್ರದ ಪುಟ್ಟ ಪಾತ್ರದಲ್ಲಿ ನಟಿಸಿದ್ದ ಮೇಘನಾ, ಡೆಡ್ಲಿ ಸೋಮ ಭಾಗ 2 ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಗಿ ನಟಿಸುತ್ತಿದ್ದಾರೆ. ಡೆಡ್ಲಿ ಸೋಮ ಚಿತ್ರದ ಮೊದಲ ಭಾಗದಲ್ಲಿ ಆದಿತ್ಯ ಜೊತೆ ರಕ್ಷಿತಾ ನಟಿಸಿದ್ದರು. ಇದೀಗ ಸರಣಿ ಚಿತ್ರದ ಬಗ್ಗೆ ಜನರಲ್ಲಿ ದೊಡ್ಡ ನಿರೀಕ್ಷೆಯಿದೆ.
ನಿರ್ದೇಶಕ ರವಿ ಶ್ರೀವತ್ಸ, ಸುಹಾಸಿನಿ, ದೇವರಾಜ್ ಅವರೊಂದಿಗೆ ಕೆಲಸ ಮಾಡುವ ಅನುಭವ ಸೊಗಸಾಗಿದೆ ಎನ್ನುತ್ತಾರೆ ಮೇಘನಾ. ಅಮೆರಿಕಾದಲ್ಲಿಯೇ ಹುಟ್ಟಿ ಬೆಳದ ಮೇಘನಾಳಿಗೆ ಸಾಂಪ್ರದಾಯಿಕ ಭಾರತೀಯ ಪಾತ್ರಗಳ ಬಗ್ಗೆ ಗೊತ್ತಿಲ್ಲ. ಆದರೂ ಈ ಚಿತ್ರದಲ್ಲಿ ಮೇಘನಾ ಲಂಗ ದಾವಣಿ ತೊಟ್ಟು ನಟಿಸಲಿದ್ದಾರಂತೆ.
ಮೊನ್ನೆ ಡೆಡ್ಲಿ ಸೋಮ 2 ಚಿತ್ರೀಕರಣದ ವೇಳೆ ನಾಯಕ ನಟ ಆದಿತ್ಯ ಮೇಲಿಂದ ಕೆಳಕ್ಕೆ ಹಾರಲು ಹೋಗಿ ಗಾಯ ಮಾಡಿಕೊಂಡಿದ್ದರು. ಇದು ಮೇಘನಾಳಿಗೆ ತುಂಬಾ ಬೇಸರವಾಗಿದೆಯಂತೆ. ಆದಷ್ಟು ಬೇಗ ಆದಿತ್ಯ ಗುಣಮುಖರಾಗಲಿ ಎಂಬುದು ಮೇಘನಾಳ ಹಾರೈಕೆ.