ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರ್ಮಾಣಕ್ಕೂ ಕೈಹಾಕಲಿದ್ದಾರೆ ನಟಿ ರಮ್ಯಾ! (Ramya | Sudeep | Just Math Mathalli)
ಸುದ್ದಿ/ಗಾಸಿಪ್
Bookmark and Share Feedback Print
 
ND
ಸುದೀರ್ಘ ಒಂದು ವರ್ಷದ ಬಳಿಕ ನಟಿ ರಮ್ಯಾ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್ ಅವರ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ನಾಯಕಿಯಾಗುವ ಮೂಲಕ ರಮ್ಯಾ ಮತ್ತೊಮ್ಮೆ ಬೆಳ್ಳಿ ಪರದೆಯ ಮೇಲೆ ಮೂಡಿ ಬಂದಿದ್ದಾರೆ. ಸುದೀರ್ಘ ಒಂದು ವರ್ಷದ ನಂತರ ಕಾಣಿಸಿಕೊಳ್ಳುತ್ತಿರುವ ರಮ್ಯಾ ಇದೀಗ ಹೊಸತೊಂದು ನಿರ್ಧಾರವನ್ನೂ ಮಾಡಿದ್ದಾರೆ. ಅದೇನೆಂದರೆ ನಿರ್ಮಾಪಕಿಯಾಗೋದು!

ಹೌದು. ಎಲ್ಲವೂ ಅಂದುಕೊಂಡಂತೆಯೇ ಆದರೆ ನಟಿ ರಮ್ಯಾ ಇದೇ ವರ್ಷದಲ್ಲಿ ಚಿತ್ರವನ್ನು ನಿರ್ಮಿಸಲಿದ್ದಾರೆ. ಅದಕ್ಕಾಗಿ ಈಗಾಗಲೇ ನಿರ್ದೇಶಕರ ಕೈಯಿಂದ ಕಥೆಯನ್ನೂ ಆಲಿಸಿದ್ದಾಗಿದೆ. ನಿರ್ದೇಶಕ ಡಿ.ಕೆ.ಪ್ರಕಾಶ್ ಅವರಿಂದ ಕಥೆಯನ್ನು ಕೇಳಿರುವ ರಮ್ಯಾ, ಅದನ್ನು ನಿರ್ಮಾಣ ಮಾಡುವ ಯೋಚನೆಯನ್ನು ಮಾಡಿದ್ದಾರೆ. ನಿರ್ಮಾಣದ ಬಗ್ಗೆ ನನಗೂ ಸ್ವಲ್ಪ ಗೊತ್ತು ಎಂದಿರುವ ರಮ್ಯಾ ನಟನೆಯನ್ನು ಬಿಟ್ಟುಬಿಡುವ ಬಗ್ಗೆ ಯೋಚಿಸಿಲ್ಲ. ನಟನೆಯ ಜೊತೆಗೆ ನಿರ್ಮಾಣ ಎಂಬ ಯೋಚನೆ ರಮ್ಯಾರದ್ದು!

2008ರಲ್ಲಿ ರಮ್ಯಾ ಮತ್ತು ಸುದೀಪ್ ಜೋಡಿಯ ಮುಸ್ಸಂಜೆ ಮಾತು ತೆರೆ ಕಂಡಿತ್ತು. ಅದು ಬಿಟ್ಟರೆ ಜಸ್ಟ್ ಮಾತಲ್ಲಿ ಚಿತ್ರ ಇದೀಗ ಬಿಡುಗಡೆಯಾಗಿದೆ. ತಮ್ಮನ್ನು ಹುಡುಕಿಕೊಂಡು ಬಂದ ಕಥೆಗಳು ಯಾವುದೂ ಹಿಡಿಸಲಿಲ್ಲ ಹಾಗಾಗಿ ಇಷ್ಟು ದಿವಸ ಯಾವುದೇ ಚಿತ್ರಗಳಲ್ಲಿ ನಟಿಸಿರಲಿಲ್ಲ ಎಂದು ರಮ್ಯಾ ಸಬೂಬು ನೀಡುತ್ತಾರೆ. ಆದರೂ, ಹಲವು ಚಿತ್ರಗಳು ಸೆಟ್ಟೇರಿದರೂ ಒಂದಲ್ಲ ಒಂದು ಕಾರಣದಿಂದ ಚಿತ್ರ ಬಿಡುಗಡೆಯವರೆಗೂ ಬರದಿರುವುದೂ ಕೂಡಾ ರಮ್ಯಾರನ್ನು ಈ ನಿರ್ಧಾರದೆಡೆಗೆ ಪ್ರೇರೇಪಿಸಿವೆ ಎಂಬುದನ್ನೂ ತಳ್ಳಿ ಹಾಕುವಂತಿಲ್ಲ. 2009ರಲ್ಲಿ ರಮ್ಯಾ ಅಭಿನಯದ ಜೊತೆಗಾರ, ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರಗಳು ಬಿಡುಗಡೆಯಾಗಬೇಕಿದ್ದರೂ, ಇನ್ನೂ ಆ ಭಾಗ್ಯ ಕಂಡಿಲ್ಲ.

ಜಸ್ಟ್ ಮಾತಲ್ಲಿ ಚಿತ್ರದ ಕಥೆ ಕೇಳಿದಾಗ ನನಗೆ ಬಹಳ ಇಷ್ಟವಾಯಿತು. ಸುದೀಪ್ ನಿರ್ದೇಶನ, ರಘು ದೀಕ್ಷಿತ್ ಸಂಗೀತ ಎಲ್ಲವೂ ಒಪ್ಪಿಗೆಯಾಗಿ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎನ್ನುತ್ತಾರೆ ನಟಿ ರಮ್ಯಾ. ಅಷ್ಟೇ ಅಲ್ಲ, ತಾನು ಅಭಿನಯಿಸಿರುವ ವಾರಣಂ ಆಯಿರಂ ತಮಿಳು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿರುವುದೂ ಕೂಡಾ ರಮ್ಯಾಗೆ ಅದ್ಭುತ ಖುಷಿ ತಂದಿದೆಯಂತೆ. ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಕೇಳಿ ತುಂಬ ಖುಷಿಯಾಯಿತು. ಚಿತ್ರದಲ್ಲಿ ಸೂರ್ಯ ಅವರ ಪಾತ್ರವೇ ಮುಖ್ಯವಾದರೂ, ನಾನೂ ಆ ಚಿತ್ರತಂಡದ ಸದಸ್ಯಳಾಗಿದ್ದೆ ಎಂಬುದು ನನಗೆ ಹೆಮ್ಮೆ. ಅಲ್ಲದೆ, ನಾನು ತಮಿಳಿನಲ್ಲಿ ಡಬ್ಬಿಂಗ್ ಮಾಡಿದ ಮೊದಲ ಚಿತ್ರವದು ಎನ್ನುತ್ತಾರೆ ರಮ್ಯ.

ರಿಮೇಕ್ ಇಷ್ಟವಿಲ್ಲ: ಹಿಂದಿ ಚಿತ್ರಗಳಾದ ವೇಕ್ ಅಪ್ ಸಿದ್ ಹಾಗೂ ತ್ರಿ ಈಡಿಯಟ್ಸ್‌ಗಳ ಕನ್ನಡ ರಿಮೇಕ್‌ಗೆ ರಮ್ಯಾಳನ್ನು ಸಂಪರ್ಕಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ ಹೌದಾ? ಎಂದು ನೇರವಾಗಿ ರಮ್ಯಾರನ್ನೇ ಕೇಳಿದರೆ ಆಕೆ, ರಿಮೇಕ್ ಚಿತ್ರಗಳಲ್ಲಿ ನಟಿಸುವ ಆಸಕ್ತಿ ನನ್ನಲ್ಲಿ ಅಷ್ಟಾಗಿ ಇಲ್ಲ. ಆದರೆ ನಟಿಸಲ್ಲ ಅಂತೇನೂ ಇಲ್ಲ. ಆದರೂ, ಈ ಚಿತ್ರಗಳ ಬಗ್ಗೆ ಈಗಲೇ ಮಾತಾಡೋದು ಸರಿಯಲ್ಲ. ಆ ಚಿತ್ರಗಳ ಚಿತ್ರತಂಡದ ವಿವರ ಪಕ್ಕಾದರೆ, ಖಂಡಿತವಾಗಿಯೂ ನಾಯಕ ನಾಯಕಿಯರ ಹೆಸರು ಅಧಿಕೃತವಾಗಿ ಹೊರಬೀಳಲಿದೆ. ನಾನೇನೂ ಹೇಳಲಾರೆ ಎಂದು ರಮ್ಯ ಜಾಣ ಉತ್ತರ ನೀಡುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮ್ಯಾ, ಜಸ್ಟ್ ಮಾತ್ ಮಾತಲ್ಲಿ, ಸುದೀಪ್ ರಮ್ಯಾ, ಜಸ್ಟ್ ಮಾತ್ ಮಾತಲ್ಲಿ, ಸುದೀಪ್