ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಾಂಧಿನಗರಕ್ಕೆ ಸೈಕಲ್ ಹತ್ತಿದ ಹಳೆ ಜೋಡಿ (Cycle | Shivarjun | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಅಗ್ನಿ ಅಲಿಯಾಸ್ ಶಿವಾರ್ಜುನ್ ತಾವೇ ನಿರ್ದೇಶಿಸಿ ನಟಿಸುತ್ತಿರುವ ಸೈಕಲ್ ಚಿತ್ರವನ್ನು ಗಾಂಧಿನಗರದತ್ತ ಓಡಿಸಿಕೊಂಡು ಬರುತ್ತಿದ್ದಾರೆ. ನಿರ್ಮಾಪಕ ರಮೇಶ್ ರೆಡ್ಡಿ ಮರಳಿ ಯತ್ನವ ಮಾಡು ಎಂಬಂತೆ ಸೈಕಲ್ ಮೇಲೆ ಹತ್ತಿದ್ದಾರೆ.

ಈ ಹಿಂದೆ ಅಗ್ನಿ ಮತ್ತು ರಮೇಶ್ ರೆಡ್ಡಿ ಕಾಂಬಿನೇಷನ್‌ನಲ್ಲಿ ಭಕ್ತ ಹೆಸರಿನ ಚಿತ್ರವೊಂದು ಮೂಡಿ ಬಂದಿತ್ತು. ಆದರೆ ಆ ಚಿತ್ರ ಬಂದದ್ದು ಹೋದದ್ದು ನಮ್ಮ ಕನ್ನಡದ ಪ್ರೇಕ್ಷಕರಿಗೆ ಗೊತ್ತಾಗಲೇ ಇಲ್ಲ. ಈ ಚಿತ್ರದಲ್ಲಿ ಕಳೆದುಕೊಂಡ ತಮ್ಮ ದುಡ್ಡನ್ನು ಸೈಕಲ್ ಚಿತ್ರದ ಮೂಲಕವಾದರೂ ಪಡೆಯಬೇಕೆಂಬುದು ರೆಡ್ಡಿ ಅವರ ಹಠ.

ಅಂದಹಾಗೆ ಸೈಕಲ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಚಿಕ್ಕಮಗಳೂರು, ಧರ್ಮಸ್ಥಳ ಹಾಗೂ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. ಅಗ್ನಿ ಮತ್ತು ರೆಡ್ಡಿ ಹತ್ತಿರುವ ಈ ಸೈಕಲ್ ಎಲ್ಲಿಯವರೆಗೆ ಓಡುವುದೋ ಎಂಬುದನ್ನ ಕಾದು ನೋಡಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೈಕಲ್, ಶಿವಾರ್ಜುನ್, ಕನ್ನಡ ಸಿನಿಮಾ