ಈ ವರ್ಷ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರ ಚಿತ್ರ ಸೆಟ್ಟೇರಲಿದೆಯಂತೆ. ಈಗಾಗಲೇ ನಟನಾ ತಾಲೀಮು ಪ್ರಾರಂಭಿಸಿರುವ ಮನೋರಂಜನ್ ಅಭಿನಯ ಮತ್ತು ನೃತ್ಯ ಶಾಲೆಗಳೆರಡಕ್ಕೂ ಪ್ರತಿದಿನ ಹಾಜರಾಗುತ್ತಿದ್ದಾರಂತೆ.
ತಮ್ಮ ಮಗನ ಚಿತ್ರವನ್ನು ಸ್ವತಃ ರವಿಚಂದ್ರನ್ ಅವರೇ ನಿರ್ದೇಶಿಸಲಿದ್ದಾರಂತೆ. ಧಮಾಕಾ ಪರಿಕಲ್ಪನೆಯಲ್ಲಿ ಚಿತ್ರ ಮೂಡಿ ಬರಲಿದೆಯಂತೆ. ಮೊದಲ ಚಿತ್ರದಲ್ಲಿ ಕ್ಯಾಮರಾ ಎದುರಿಸುವ ಮೊದಲು ಆತ ನಟನೆಯಲ್ಲಿ ಆಲ್ ರೌಂಡರ್ ಆಗಬೇಕೆಂಬುದು ಕ್ರೇಜಿ ಸ್ಟಾರ್ ಕನಸು. ಅಂತೆಯೇ ಅವರ ಪುತ್ರ ಅಭಿನಯವನ್ನು ಕರಗತಮಾಡಿಕೊಳ್ಳುತ್ತಿದ್ದಾನೆ.
ಅಂದೊಮ್ಮೆ ತನ್ನ ಹಳೆಯ ಪ್ರೇಮಲೋಕವನ್ನೇ ಮಗನಿಗಾಗಿ ರಿಮೇಕ್ ಮಾಡುತ್ತಾರೆಂಬ ಸುದ್ದಿಯಾದರೂ, ಅದನ್ನು ರವಿಚಂದ್ರನ್ ಅವರೇ ತಮ್ಮಂತೆ ತಮ್ಮ ಮಗನೂ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಬೇಕು ಎಂಬ ಕನಸು ಈ ಕ್ರೇಜಿ ಸ್ಟಾರ್ ಖ್ಯಾತಿಯ ರವಿಚಂದ್ರನ್ ಅವರದ್ದು.