ಯುವ ನಾಯಕ ನಟ ಚಿರಂಜೀವಿ ಸರ್ಜಾರ ಬತ್ತಳಿಕೆಗೆ ಹೊಸ ಹೊಸ ಚಿತ್ರಗಳು ಸೇರ್ಪಡೆಯಾಗುತ್ತಿವೆ. ವಾಯುಪುತ್ರ ಚಿತ್ರದಲ್ಲಿ ಯಶಸ್ಸು ಕಾಣದಿದ್ದರೂ ಚಿರಂಜೀವಿ ಸರ್ಜಾ, ನಿರ್ಮಾಪಕ ರಾಮು ಅವರ ಬ್ಯಾನರಿನ ಗಂಡೆದೆ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು.
ಹೊಸ ಸುದ್ದಿ ಏನಪ್ಪಾ ಎಂದರೆ ಮಹೇಶ್ ಬಾಬು ನಿರ್ದೇಶನದ ಚಿರು ಎಂಬ ಚಿತ್ರದಲ್ಲಿ ನಾಯಕನಾಗಿ ಚಿರಂಜೀವಿ ಸರ್ಜಾ ಅಭಿನಯಿಸಲಿದ್ದಾರಂತೆ. ಗಂಡೆದೆ ಚಿತ್ರೀಕರಣ ಮುಗಿಯುತ್ತಿದ್ದಂತೆ ಅವರು ಚಿರು ಚಿತ್ರದ ಚಿತ್ರೀಕರಣಕ್ಕೆ ಹಾರಲಿದ್ದಾರಂತೆ.
ಪ್ರಾರಂಭದಲ್ಲಿ ಸೋಲು ಕಂಡ ಚಿರಂಜೀವಿ ಸರ್ಜಾ ಅವರನ್ನು ಈಗ ಅವಕಾಶಗಳು ಮಾತ್ರ ಹುಡುಕಿಕೊಂಡು ಬರುತ್ತಿವೆ ಎನ್ನುವುದು ಮಾತ್ರ ಸಂತೋಷದ ಸಂಗತಿ.