ನಿರ್ದೇಶಕ ಚಂದ್ರು ಇದೀಗ ಎರಡು ಚಿತ್ರಗಳನ್ನು ನಿರ್ದೇಶಿಸಬೇಕಿದೆ. ಒಂದು ನಿರ್ದೇಶಕ ಪ್ರೇಮ್ ನಾಯಕತ್ವದ ಮಳೆ ಚಿತ್ರ. ಮತ್ತೊಂದು ಶಿವರಾಜ್ಕುಜ್ ಕುಮಾರ್ ನಾಯಕತ್ವದ ಮೈಲಾರಿ ಚಿತ್ರ. ಶಿವಣ್ಣನ 99ನೇ ಚಿತ್ರವಾಗಿ ಮೈಲಾರಿ ಮೂಡಿ ಬರಲಿದೆ. ತಮಾಷೆಯೆಂದರೆ ಮತ್ತೊಂದೆಡೆ ನಿರ್ದೇಶಕ ಪ್ರೇಮ್ ಶಿವಣ್ಣನ 100ನೇ ಚಿತ್ರ ಜೋಗಯ್ಯನನ್ನು ತಯಾರು ಮಾಡುತ್ತಿದ್ದಾರೆ.
ಚಂದ್ರು ಮಳೆಯನ್ನು ಪಕ್ಕಕ್ಕಿಟ್ಟು ಮೈಲಾರಿಯ ಸವಾರಿಯಲ್ಲಿದ್ದಾರೆ. ಪ್ರೇಮ್ ಮಳೆ ಚಿತ್ರದಲ್ಲಿ ನಟಿಸುವುದನ್ನು ಬಿಟ್ಟು ಜೋಗಯ್ಯನ ತಯಾರಿಯಲ್ಲಿದ್ದಾರೆ. ಮೈಲಾರಿಗೆ ಗುರುಕಿರಣ್ ಮತ್ತು ಜೋಗಯ್ಯನಿಗೆ ಹರಿಕೃಷ್ಣ ಸಂಗೀತ ನೀಡಲಿದ್ದು, ಇಬ್ಬರಲ್ಲೂ ಪೈಪೋಟಿ ಶುರುವಾಗಿದೆಯಂತೆ.
ಒಟ್ಟಾರೆ ಇಬ್ಬರು ನಿರ್ದೇಶಕರ ಹಾಗೂ ಸಂಗೀತ ನಿರ್ದೇಶಕರ ಕಾಳಗದ ನಡುವೆ ಶಿವಣ್ಣ ಕಂಗಾಲಾಗಿದ್ದಾರಂತೆ.